ಕ್ರೂರತನ: ಗಾಝಾಕ್ಕೆ ಮರಳುತ್ತಿದ್ದ ಐದು ವಯಸ್ಸಿನ ಹೆಣ್ಣು ಮಗುವನ್ನು ಕೊಂದ ಇಸ್ರೇಲಿ ಸೇನೆ

ತಾಯಿಯ ಜೊತೆ ಪಶ್ಚಿಮ ಗಾಝಾಕ್ಕೆ ಮರಳುತ್ತಿದ್ದ ಐದು ವಯಸ್ಸಿನ ಹೆಣ್ಣು ಮಗುವನ್ನು ಇಸ್ರೇಲಿ ಸೇನೆ ಗುಂಡಿಕ್ಕಿ ಸಾಯಿಸಿದೆ. ತನ್ನ ಸಹೋದರಿಯರು ಮತ್ತು ತಾಯಿಯ ಜೊತೆ ಮನೆಗೆ ಮರಳುತ್ತಿದ್ದ ಸಾಲಿ ಅಬು ಲೈಲಾ ಎಂಬ ಈ ಬಾಲೆಯನ್ನು ಇಸ್ರೇಲಿ ಸೈನಿಕರು ಗುಂಡಿಕ್ಕಿ ಕೊಂದಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಿಶ್ಚೇಚಿತವಾದ ಮಗುವಿನ ದೇಹವನ್ನು ಅಪ್ಪಿ ಹಿಡಿದು ತಾಯಿ ಅಳುತ್ತಿರುವ ಫೋಟೋವನ್ನು ಫೆಲೆಸ್ತೀನಿ ಫೋಟೋಗ್ರಾಫರ್ ಅತಿಯ ದರ್ವೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪಶ್ಚಿಮ ಗಾಝಕ್ಕೆ ಮರಳುತ್ತಿರುವ ನೂರಾರು ಮಂದಿಯಲ್ಲಿ ಈ ತಾಯಿ ಮತ್ತು ಮಕ್ಕಳು ಸೇರಿದ್ದರು. ತಮ್ಮ ಸ್ವಂತ ಮನೆ ಮತ್ತು ನಾಡುಗಳಿಗೆ ಹೊರಟ ಅನೇಕರ ಮೇಲೆ ಇಸ್ರೇಲ್ ಯೋಧರು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲಿ ಸೈನಿಕರನ್ನು ಕಂಡು ಹೆದರಿ ಓಡಲು ಹೊರಟ ಮಗುವನ್ನು ತಾಯಿ ಹತ್ತಿರ ಕರೆಯುವಾಗಲೇ ಆಕೆಯ ಗಲ್ಲಕ್ಕೆ ಯೋಧರ ಗುಂಡು ತಗಲಿದೆ.
ನಾನು ನನ್ನ ಮಗಳನ್ನು ನೆಲದಲ್ಲಿ ಮಲಗಿಸಲು ಶ್ರಮಿಸಿದೆ.ಆದರೆ ಅವಳಿಗೆ ಅಲುಗಾಡಲೂ ಸಾಧ್ಯವಾಗಿಲ್ಲ. ನನ್ನ ದೇಹವಿಡಿ ರಕ್ತದಿಂದ ತೊಯ್ದು ಹೋಯಿತು. ನಾನವಳನ್ನು ತಟ್ಟಿ ಎಬ್ಬಿಸಿದೆ. ಆದರೆ ಆಕೆಗೆ ಮಾತನಾಡಲೂ ಸಾಧ್ಯವಾಗಿಲ್ಲ ಎಂದು ಕಣ್ಣೀರು ಹರಿಸುತ್ತಾ ಸಬರೀನಾ ಅನ್ನುವ ತಾಯಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth