ಗಾಝಾ ಯುದ್ಧ: 200 ದಿನಗಳ ಬಳಿಕ ಅಮೆರಿಕ-ಇಸ್ರೇಲಿ ಒತ್ತೆಯಾಳುಗಳ ವಿಡಿಯೋ ಬಿಡುಗಡೆ ಮಾಡಿದ ಹಮಾಸ್ - Mahanayaka
12:33 PM Saturday 23 - August 2025

ಗಾಝಾ ಯುದ್ಧ: 200 ದಿನಗಳ ಬಳಿಕ ಅಮೆರಿಕ-ಇಸ್ರೇಲಿ ಒತ್ತೆಯಾಳುಗಳ ವಿಡಿಯೋ ಬಿಡುಗಡೆ ಮಾಡಿದ ಹಮಾಸ್

24/04/2024


Provided by

ಇಸ್ರೇಲ್ ಮತ್ತು ಗಾಝಾದ ಹಮಾಸ್ ಹೋರಾಟಗಾರರ ನಡುವಿನ ಯುದ್ಧದ 201 ನೇ ದಿನದಂದು ಒತ್ತೆಯಾಳುಗಳ ವೀಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇದನ್ನು ಇಸ್ರೇಲಿ ಮಾಧ್ಯಮಗಳು ಅಮೆರಿಕನ್-ಇಸ್ರೇಲಿ ಹರ್ಷ್ ಗೋಲ್ಡ್ಬರ್ಗ್-ಪೋಲಿನ್ ಅವರದ್ದು ಎಂದು ಗುರುತಿಸಿವೆ.

ಈ ವಿಡಿಯೋವನ್ನು ಟೆಲಿಗ್ರಾಮ್ ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಅಕ್ಟೋಬರ್ 7 ರಂದು ಹಮಾಸ್ ದಾಳಿಯ ಸಮಯದಲ್ಲಿ ದಕ್ಷಿಣ ಇಸ್ರೇಲ್ ನ ನೋವಾ ಸಂಗೀತ ಉತ್ಸವದಿಂದ ಹರ್ಷ್ ಗೋಲ್ಡ್ಬರ್ಗ್-ಪೋಲಿನ್ ಅವರನ್ನು ಅಪಹರಿಸಲಾಗಿತ್ತು.

ವೀಡಿಯೊದಲ್ಲಿ, ಹರ್ಷ್ ಗೋಲ್ಡ್ಬರ್ಗ್-ಪೋಲಿನ್ “ನಾನು ನನ್ನ ಸ್ನೇಹಿತರೊಂದಿಗೆ ಸುತ್ತಾಡಲು ಹೋಗಿದ್ದೆ, ಬದಲಿಗೆ, ನನ್ನ ದೇಹದಾದ್ಯಂತ ತೀವ್ರ ಗಾಯಗಳೊಂದಿಗೆ ನನ್ನ ಜೀವನಕ್ಕಾಗಿ ಹೋರಾಡುತ್ತಿದ್ದೇನೆ” ಎಂದು ಹೇಳುವುದನ್ನು ಕಾಣಬಹುದು.

ವಿಶೇಷವೆಂದರೆ, 23 ವರ್ಷದ ಹರ್ಷ್ ಗೋಲ್ಡ್ಬರ್ಗ್-ಪೋಲಿನ್ ಅವರ ತಾಯಿ ರಾಚೆಲ್ ಗೋಲ್ಡ್ಬರ್ಗ್ ಅವರನ್ನು ಟೈಮ್‌ನ 2024 ರ ವಾರ್ಷಿಕ TIME100 ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು.
ಜೆರುಸಲೇಮ್ ಪೋಸ್ಟ್ ಪ್ರಕಾರ, ಅಕ್ಟೋಬರ್ 7 ರಿಂದ, ರಾಚೆಲ್ ಮತ್ತು ಜಾನ್ ಗೋಲ್ಡ್ಬರ್ಗ್ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ ಮತ್ತು ಇಸ್ರೇಲ್ ನಿಂದ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ನಗರಕ್ಕೆ ಪ್ರಯಾಣಿಸುತ್ತಿದ್ದಾರೆ. ವಿಶ್ವ ನಾಯಕರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಂದವನ್ನು ಮಾಡಿದ್ದಾರೆ ಎಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ