ಕಳೆದು ಹೋದ ಅಸ್ಮಿತೆಗಾಗಿ ಹುಡುಕಾಡುತ್ತಿದ್ದೇವೆ: ನಟಿ ವಿದ್ಯಾಬಾಲನ್ ಹೇಳಿಕೆ - Mahanayaka

ಕಳೆದು ಹೋದ ಅಸ್ಮಿತೆಗಾಗಿ ಹುಡುಕಾಡುತ್ತಿದ್ದೇವೆ: ನಟಿ ವಿದ್ಯಾಬಾಲನ್ ಹೇಳಿಕೆ

25/04/2024


Provided by

“ರಾಜಕೀಯ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ ನಾವು ಕಳೆದು ಹೋಗಿ ಅಸ್ಮಿತೆಗಾಗಿ ಹುಡುಕುತ್ತಿದ್ದೇವೆ” ಎಂದು ನಟಿ ವಿದ್ಯಾ ಬಾಲನ್‌ ಹೇಳಿದ್ದಾರೆ. ಧಾರ್ಮಿಕ ಕಟ್ಟಡಕ್ಕೆ ದೇಣಿಗೆ ನೀಡುವುದಿಲ್ಲ. ಆಸ್ಪತ್ರೆ, ಶಾಲೆ ಅಥವಾ ಶೌಚಾಲಯಕ್ಕೆ ನಾನು ಖುಷಿಯಿಂದ ದೇಣಿಗೆ ನೀಡುವೆ ಎಂದು ವಿದ್ಯಾ ಬಾಲನ್‌ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ವಿದ್ಯಾ ಬಾಲನ್‌, ಧ್ರುವೀಕರಣದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೂ ಇದೆ ಎಂದಿದ್ದಾರೆ, ಅಷ್ಟೇ ಅಲ್ಲದೇ ಇದರಿಂದ ನಾವು ಹಿಂದೆಂದಿಗಿಂತಲೂ ಒಂಟಿಯಾಗಿದ್ದೇವೆ . ಇದು ಒಂದು ದೇಶದ ವಿಚಾರವಲ್ಲ ಎಂದರು.

“ಯಾರಾದರೂ ಧಾರ್ಮಿಕ ಕಟ್ಟಡ ನಿರ್ಮಿಸಲು ದೇಣಿಗೆ ಕೋರಿದರೆ ನಾನು ನೀಡುವುದಿಲ್ಲ. ಆಸ್ಪತ್ರೆ, ಶಾಲೆ ಅಥವಾ ಶೌಚಾಲಯ ನಿರ್ಮಾಣಕ್ಕೆ ನಾನು ಖುಷಿಯಿಂದ ದೇಣಿಗೆ ನೀಡುವೆ ಎಂದು ವಿದ್ಯಾ ಹೇಳಿದರು.
“ನನಗೆ ರಾಜಕೀಯದ ಬಗ್ಗೆ ತುಂಬಾ ಭಯವಿದೆ. ಅವರು ನಮ್ಮನ್ನು ನಿಷೇಧಿಸಬಹುದು ಅಥವಾ ಕಪ್ಪು ಪಟ್ಟಿಗೆ ಸೇರಿಸಬಹುದು” ಎಂದು ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ