ಪರೀಕ್ಷೆಯ ಉತ್ತರಪತ್ರಿಕೆಯಲ್ಲಿ ‘ಜೈಶ್ರೀರಾಂ’ ಎಂದು ಉತ್ತರಿಸಿದ್ದಕ್ಕೆ ಶೇ.50 ರಷ್ಟು ಹೆಚ್ಚಿನ ಅಂಕಗಳನ್ನು ನೀಡಿದ ಮೌಲ್ಯಮಾಪಕರು..!

ವಿದ್ಯಾರ್ಥಿ ಬರೆದ ಗುಣಮಟ್ಟದ ಉತ್ತರದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರ ಪ್ರದೇಶದ ವಿವಿಯೊಂದರಲ್ಲಿ ‘ಜೈ ಶ್ರೀರಾಮ್’ ಹಾಗೂ ಭಾರತೀಯ ಕ್ರಿಕೆಟ್ ಪಟುಗಳ ಹೆಸರನ್ನು ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳಲ್ಲಿ ಬರೆದಿರುವುದಕ್ಕೆ ಮೌಲ್ಯಮಾಪಕರು ಶೇ.50 ರಷ್ಟು ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ.
ಅಂದಹಾಗೇ ಈ ಘಟನೆ ನಡೆದಿರೋದು ಜುನಾಪುರ್ ನಗರದ ವೀರ್ ಬಹುದ್ದೂರ್ ಸಿಂಗ್ ಪೂರ್ವಾಂಚಲ್ ವಿವಿಯಲ್ಲಿ. ಮೂಲಗಳ ಪ್ರಕಾರ,
ಈ ರೀತಿ ಹೆಚ್ಚು ಅಂಕ ನೀಡಿ ಕೃತ್ಯವೆಸಗಿದ ಇಬ್ಬರು ಶಿಕ್ಷಕರನ್ನು ವಜಾಗೊಳಿಸಲು ವಿಶ್ವವಿದ್ಯಾಲಯ ಶಿಫಾರಸ್ಸು ಮಾಡಿದೆ.
ವೀರ್ ಬಹುದ್ದೂರ್ ಸಿಂಗ್ ಪೂರ್ವಾಂಚಲ್ ವಿವಿಯ ಮಾಜಿ ವಿದ್ಯಾರ್ಥಿಯಾದ ದಿವ್ಯಾನ್ಷು ಸಿಂಗ್ ಎಂಬುವವರು ಆರ್‌ಟಿಐ ಮೂಲಕ ಉತ್ತರ ಪತ್ರಿಕೆಗಳನ್ನು ಪುನರ್ ಪರಿಶೀಲಿಸುವ ಮಾಹಿತಿ ಕೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ಫಾರ್ಮಸಿ ಕೋರ್ಸಿನ ನಾಲ್ವರು ವಿದ್ಯಾರ್ಥಿಗಳು ತಮ್ಮ ಡಿ ಫಾರ್ಮಾ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಹಲವು ಕಡೆಗಳಲ್ಲಿ ‘ಜೈ ಶ್ರೀರಾಮ್’ ಹಾಗೂ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳ ಹೆಸರುಗಳನ್ನು ಬರೆದಿದ್ದರು.
ಈ ರೀತಿ ಉತ್ತರ ಬರೆದ ಕಾರಣಕ್ಕಾಗಿ ಈ ನಾಲ್ವರು ವಿದ್ಯಾರ್ಥಿಗಳು ಶೇ.50 ರಷ್ಟು ಹೆಚ್ಚಿನ ಅಂಕ ಪಡೆದಿದ್ದರು. ನಂತರ ಉತ್ತರ ಪತ್ರಿಕೆಗಳನ್ನು ಪುನಃ ಮರುಮೌಲ್ಯಮಾಪನಗೊಳಿಸಿದ ನಂತರ ಆ ನಾಲ್ವರು ವಿದ್ಯಾರ್ಥಿಗಳು ಶೂನ್ಯ ಅಂಕ ಪಡೆದಿದ್ದರು.
ಆರ್‌ಟಿಐ ಅರ್ಜಿ ಸಲ್ಲಿಸಿ ಈ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಪಡೆಯಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth