ನೀವು ಮುಸ್ಲಿಮರ ಬಗ್ಗೆ ಮಾತ್ರ ಯಕೆ ಮಾತನಾಡುತ್ತೀರಿ..? ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ - Mahanayaka
1:36 AM Saturday 18 - October 2025

ನೀವು ಮುಸ್ಲಿಮರ ಬಗ್ಗೆ ಮಾತ್ರ ಯಕೆ ಮಾತನಾಡುತ್ತೀರಿ..? ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

01/05/2024

ಬಡ ಕುಟುಂಬಗಳಲ್ಲಿ ಮಕ್ಕಳು ಹೆಚ್ಚು. ಯಾಕೆಂದರೆ ಅವರಲ್ಲಿ ಸಂಪತ್ತು ಇಲ್ಲ. ಆದರೆ ನೀವು ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತೀರಿ..? ಮುಸ್ಲಿಮರು ಕೂಡ ಈ ದೇಶಕ್ಕೆ ಸೇರಿದವರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.


Provided by

ನಮ್ಮ ತಂದೆ ತಾಯಿಗೆ ನಾನೊಬ್ಬನೇ ಮಗನಾದರೂ ನನಗೆ ಐದು ಬಂದಿ ಮಕ್ಕಳಿದ್ದಾರೆ. ನಮ್ಮ ಮನೆಗೆ ಬೆಂಕಿ ಹಚ್ಚಿದಾಗ ನನ್ನ ತಾಯಿ ಸಹೋದರಿ ಮತ್ತು ಚಿಕ್ಕಪ್ಪ ಜೀವ ಕಳೆದುಕೊಂಡರು. ನನ್ನ ತಂದೆಗೆ ನಾನೊಬ್ಬನೇ ಮಗ. ಆದ್ದರಿಂದ ನಮ್ಮ ಮನೆಯಲ್ಲಿ ಮಕ್ಕಳನ್ನು ನೋಡುವುದು ಅವರ ಬಯಕೆಯಾಗಿತ್ತು ಎಂದು ಖರ್ಗೆ ವಿವರಿಸಿದ್ದಾರೆ
ನಾವು ಬಹುಮತ ಗಳಿಸುವ ನಿಟ್ಟಿನಲ್ಲಿ ಮುನ್ನಡೆದಿದ್ದೇವೆ. ಈ ಕಾರಣದಿಂದ ಮೋದಿ ಈಗ ಮಂಗಳಸೂತ್ರ ಮತ್ತು ಮುಸ್ಲಿಮರ ಬಗ್ಗೆ ಮಾತಾಡುತ್ತಿದ್ದಾರೆ. ನಿಮ್ಮ ಸಂಪತ್ತನ್ನು ನಾವು ಸುಲಿಗೆ ಮಾಡುತ್ತೇವೆ ಹಾಗೂ ಹೆಚ್ಚು ಮಕ್ಕಳಿದ್ದವರಿಗೆ ಹಂಚುತ್ತೇವೆ ಎಂದವರು ಹೇಳುತ್ತಿದ್ದಾರೆ. ಬಡವರಿಗೆ ಯಾವಾಗಲೂ ಹೆಚ್ಚು ಮಕ್ಕಳು. ಮುಸ್ಲಿಮರಿಗೆ ಮಾತ್ರ ಹೆಚ್ಚು ಮಕ್ಕಳಿರುತ್ತಾರೆಯೇ ಎಂದವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ