ಆ ತಿಮಿಂಗಿಲ ಹಿಡಿದರೆ ಎಲ್ಲವೂ ಗೊತ್ತಾಗುತ್ತದೆ: ಪೆನ್ ಡ್ರೈವ್ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು? - Mahanayaka
11:31 PM Wednesday 10 - September 2025

ಆ ತಿಮಿಂಗಿಲ ಹಿಡಿದರೆ ಎಲ್ಲವೂ ಗೊತ್ತಾಗುತ್ತದೆ: ಪೆನ್ ಡ್ರೈವ್ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

h.d kumaraswamy
14/05/2024

ಬೆಂಗಳೂರು: ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದು, ಎಸ್ ಐಟಿ ಅಧಿಕಾರಿಗಳ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Provided by

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪೆನ್ ಡ್ರೈವ್ ಬಿಡುಗಡೆ ಹಿಂದೆ ದೊಡ್ಡ ತಿಮಿಂಗಿಲವಿದೆ. ಪೆನ್ ಡ್ರೈವ್ ಹಂಚಿದವರ ವಿರುದ್ಧ ಎಸ್ ಐಟಿ ಇನ್ನೂ ಕ್ರಮ ಕೈಗೊಂಡಿಲ್ಲ. ಯಾರೊಬ್ಬರನ್ನೂ ಬಂಧಿಸಿಲ್ಲ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್ ಐಟಿ ತನಿಖೆಯ ವರದಿ ಶಾಸಕರಿಗೆ ಸರಬರಾಜಾಗುತ್ತಿದೆಯೇ? ಎಂಬ ಅನುಮಾನವಿದೆ. ಪೆನ್ ಡ್ರೈವ್ ಹಿಂದೆ ದೊಡ್ಡ ತಿಮಿಂಗಿಲವಿದೆ. ಆ ತಿಮಿಂಗಿಲ ಯಾರೆಂದು ರಾಜ್ಯದ ಜನತೆಗೂ ಗೊತ್ತಿದೆ. ಅದು ಸರ್ಕಾರದಲ್ಲಿಯೇ ಇದೆ. ಆ ತಿಮಿಂಗಿಲ ಹಿಡಿದರೆ ಎಲ್ಲವೂ ಗೊತ್ತಾಗುತ್ತದೆ. ದೊಡ್ಡ ತಿಮಿಂಗಿಲ ಬಿಟ್ಟು ಇವರು ಸಣ್ಣ ಪುಟ್ಟದ್ದನ್ನು ಹಿಡಿಯಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿಮಿಂಗಿಲದ ಆಡಿಯೋ ಬಿಟ್ಟದ್ದಕ್ಕೇ ಕೇಸ್ ಆಯ್ತು. ಆಡಿಯೋ ಬಿಟ್ಟವರ ಮೇಲೆಯೇ ಕೇಸ್ ಹಾಕಿ ಕೂರಿಸಿದ್ದಾರೆ. ಅವರ್ಯಾರೋ ದೆಹಲಿಗೆ ತೆರಳಿ ದಾಖಲೆ ಬಿಡುಗಡೆಗೆ ಹೊರಟಿದ್ದರು ಎಂದು ಆತನನ್ನು ಹಿಡಿಯಲಾಗಿದೆ. ಯಾವ ದಾಖಲೆ ಬಿಡುಗಡೆಗೆ ಹೊರಟಿದ್ದರು? ಅವರನ್ನು ಹಿಡಿದು ಇವರು ಯಾವ ದಾಖಲೆ ವಶಪಡಿಸಿಕೊಳ್ಳಲು ಹೊರಟಿದ್ದಾರೆ? ಎಂಬುದೆಲ್ಲವೂ ಚರ್ಚೆಯಾಗಬೇಕಲ್ಲವೇ? ಪ್ರಕರಣದಲ್ಲಿ ಎಸ್ ಐಟಿ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ನೋಡಿ ಎಂದು ಕಿಡಿಕಾರಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ