ಆನೆ ಅಟ್ಟಹಾಸ: ಅಡಿಕೆ, ಕಾಫಿ, ಏಲಕ್ಕಿ ತೋಟಕ್ಕೆ ಭಾರೀ ನಷ್ಟ - Mahanayaka
9:15 PM Wednesday 12 - November 2025

ಆನೆ ಅಟ್ಟಹಾಸ: ಅಡಿಕೆ, ಕಾಫಿ, ಏಲಕ್ಕಿ ತೋಟಕ್ಕೆ ಭಾರೀ ನಷ್ಟ

mudigere
05/11/2025

ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರ ಗ್ರಾಮದ ರೈತ ರಿಚರ್ಡ್ ಲೋಬೊ ಅವರ ತೋಟಕ್ಕೆ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಹಗಲು–ರಾತ್ರಿ ದಾಳಿ ನಡೆಸುತ್ತಿವೆ.

ಇತ್ತೀಚೆಗೆ ಮತ್ತೊಮ್ಮೆ ಬಂದು ತೋಟದಲ್ಲಿದ್ದ ಅಡಿಕೆ, ಕಾಫಿ ಹಾಗೂ ಏಲಕ್ಕಿ ಗಿಡಗಳನ್ನು ಪುಡಿ ಮಾಡಿದ್ದು, ಅಪಾರ ಮೌಲ್ಯದ ಬೆಳೆ ನಾಶವಾಗಿದೆ. ವರ್ಷಪೂರ್ತಿ ಶ್ರಮಿಸಿ ಬೆಳೆ ಬೆಳೆದ ರೈತರು ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆನೆ ದಾಳಿಯಿಂದ ಹಲವಾರು ಗಿಡಗಳು ನೆಲಸಮವಾಗಿದ್ದು, ತೋಟದ ಭಾಗಶಃ ಬೇಲಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ಹಾಗೂ ರೈತರು ಕಾಡಾನೆಗಳ ಅಟ್ಟಹಾಸದಿಂದ ಭಯಭೀತರಾಗಿದ್ದು, ರಾತ್ರಿ ನಿದ್ರೆ ಕಳೆದುಕೊಂಡಿದ್ದಾರೆ.

ಗ್ರಾಮಸ್ಥರು ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ಕಾಡಾನೆ ತೊಲಗಿಸಲು ಮತ್ತು ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ