ತುನಿಷಿಯಾದ ಕ್ರಾಂತಿಕಾರಿ ನಾಯಕನ ಮೂರು ವರ್ಷಗಳ ಶಿಕ್ಷೆಯನ್ನು ಎತ್ತಿ ಹಿಡಿದ ಕೋರ್ಟ್: ಗನೂಶಿಯವ್ರ ಭಾವನಾತ್ಮಕ ಪತ್ರ ವೈರಲ್

ತುನಿಷಿಯಾದ ಕ್ರಾಂತಿಕಾರಿ ನಾಯಕ ಮತ್ತು ಅನ್ನಹ್ದ ಪಾರ್ಟಿಯ ಮುಖಂಡ ರಾಶಿದುಲ್ ಗನೂಶಿಯವರಿಗೆ ವಿಧಿಸಲಾಗಿರುವ ಮೂರು ವರ್ಷಗಳ ಶಿಕ್ಷೆಯನ್ನು ಅಲ್ಲಿನ ಅಪೀಲು ನ್ಯಾಯಾಲಯ ಎತ್ತಿ ಹಿಡಿದಿದ್ದು ಈ ಬಗ್ಗೆ ಗನೂಷಿ ಜೈಲಿನಿಂದ ಅತ್ಯಂತ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ.
ಹಿಂದಿನ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಅವರ ಅಳಿಯ ರಫೀಕ್ ಅಬ್ದುಲ್ ಸಲಾಂರಿಗೂ ಶಿಕ್ಷೆ ವಿಧಿಸಲಾಗಿದ್ದಲ್ಲದೆ ಒಂದು ಮಿಲಿಯನ್ ಡಾಲರ್ ದಂಡವನ್ನೂ ವಿಧಿಸಲಾಗಿದೆ. ವಿದೇಶದಿಂದ ಹಣ ಪಡೆದ ಮತ್ತು ಲಾಬಿ ಮಾಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.
ನ್ಯಾಯಾಲಯವು ಪ್ರಭುತ್ವದ ಅಧೀನಕ್ಕೆ ಒಳಗಾಗಿರುವಂತೆ ವರ್ತಿಸಿರುವುದು ದುಃಖ ತಂದಿದೆ. ನಾನು ಯಾವ ತಪ್ಪು ಮಾಡಿಲ್ಲ ಮತ್ತು ನಾನು ಅತ್ಯುತ್ತಮ ಪ್ರಾಮಾಣಿಕ ವ್ಯಕ್ತಿಯಾಗಿದ್ದೇನೆ ಅನ್ನೋದನ್ನು ನನ್ನ ಮನಸ್ಸು ಹೇಳುತ್ತಿದೆ. ರಾಜಕೀಯ ಕಾರಣಕ್ಕಾಗಿ ನನ್ನನ್ನು ಮತ್ತು ಅನ್ನಹ್ದ ಪಕ್ಷದ ಇತರ ಮುಖಂಡರನ್ನು ಗುರಿ ಮಾಡಲಾಗಿದೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ. ತುನಿಶ್ಯಾದ ಅಧ್ಯಕ್ಷ ಸಯೀದ್ ವಿಪಕ್ಷಗಳ ವಿರುದ್ಧ ದ್ವೇಷದ ಕ್ರಮ ಕೈಗೊಳ್ಳುತ್ತಿದ್ದು ಭಯೋತ್ಪಾದನೆ ಮತ್ತು ಅಕ್ರಮ ಹಣ ವರ್ಗಾವಣೆಯ ಹೆಸರಲ್ಲಿ ಸತಾಯಿಸುತ್ತಿದ್ದಾರೆ. ತುನಿಷಿಯದ ಅಸ್ಮಿತೆಯನ್ನು ಎತ್ತಿಕೊಂಡು ಇಡೀ ವಿಪಕ್ಷಗಳನ್ನು ಮಟ್ಟ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth