ಬೆಳ್ಳಂಬೆಳಗ್ಗೆ ರೌಂಡ್ಸ್ ಹಾಕಿದ ಒಂಟಿ ಸಲಗ: ಗ್ರಾಮಸ್ಥರಿಗೆ ಆತಂಕ - Mahanayaka

ಬೆಳ್ಳಂಬೆಳಗ್ಗೆ ರೌಂಡ್ಸ್ ಹಾಕಿದ ಒಂಟಿ ಸಲಗ: ಗ್ರಾಮಸ್ಥರಿಗೆ ಆತಂಕ

elephant
22/05/2024


Provided by

ಚಿಕ್ಕಮಗಳೂರು:  ಕೊಟ್ಟಿಗೆಹಾರ ಸಮೀಪ ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಕಾಡಾನೆ ಓಡಾಟದಿಂದ ಸ್ಥಳೀಯರು ಭಯಭೀತರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದ ಆಜಾದ್ ನಗರ ಹಾಗೂ ತರುವೆಯಲ್ಲಿ ಒಂಟಿ ಸಲಗ ರೌಂಡ್ಸ್ ಹಾಕಿದ್ದು, ಚಾರ್ಮಾಡಿ ಘಾಟ್ ಅಥವಾ ಬೇರೆಡೆಯಿಂದ ಕಾಡಾನೆ ಆಗಮಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಸಮೀಪವಿರುವ ಗ್ರಾಮ ತರುವೆಯಲ್ಲಿ ಮನೆಯೊಂದರ ಸಮೀಪವೇ ಕಾಡಾನೆ ಸಂಚಾರ ಮಾಡಿದ್ದು, ಸಿಸಿಟಿವಿಯಲ್ಲಿ  ದೃಶ್ಯ ಸೆರೆಯಾಗಿದೆ.

ಗ್ರಾಮಗಳ ಸಮೀಪವಿರುವ ಕಾಡಾನೆಯನ್ನು ಓಡಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ  ಮನವಿ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ