ಇಂಡಿಯಾ ಒಕ್ಕೂಟ ಸರಕಾರ ರಚಿಸಲಿದೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ - Mahanayaka
8:38 AM Saturday 20 - December 2025

ಇಂಡಿಯಾ ಒಕ್ಕೂಟ ಸರಕಾರ ರಚಿಸಲಿದೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

24/05/2024

ಲೋಕಸಭಾ ಚುನಾವಣೆ ಇನ್ನೇನು ಕೊನೆಯ ಘಟ್ಟಕ್ಕೆ ತಲುಪಿರುವಾಗ ಇಂಡಿಯಾ ಒಕ್ಕೂಟದ ವಿಜಯ ಸಾಧ್ಯತೆಯ ಬಗ್ಗೆ ಹೆಚ್ಚೆಚ್ಚು ಆತ್ಮವಿಶ್ವಾಸದ ಮಾತುಗಳು ಕೇಳಿ ಬರುತ್ತಿವೆ. ವಿವಿಧ ರಾಜ್ಯಗಳಿಂದ ಬರುತ್ತಿರುವ ಮಾಹಿತಿಗಳ ಆಧಾರದಲ್ಲಿ ಹೇಳುವುದಾದರೆ ಈ ಬಾರಿ ಎನ್ ಡಿ ಎ ಸೋಲನುಭವಿಸಲಿದ್ದು ಇಂಡಿಯಾ ಒಕ್ಕೂಟ ಸರಕಾರ ರಚಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಾವು ಹಲವು ರಾಜ್ಯಗಳ ಅನೇಕ ಪ್ರದೇಶಗಳಿಗೆ ಭೇಟಿ ಕೊಟ್ಟೆವು. ಕಾಂಗ್ರೆಸ್ ಮರಳಿ ತನ್ನ ಗತ ವೈಭವಕ್ಕೆ ಮರಳಲಿದೆ ಮತ್ತು ಇಂಡಿಯಾ ಕೂಟ ಅಧಿಕಾರಕ್ಕೆ ಬರಲಿದೆ ಎಂಬ ಅಭಿಪ್ರಾಯಗಳು ಲಭಿಸಿವೆ. ಜನಸಾಮಾನ್ಯರು ಮತ್ತು ಮಹಿಳೆಯ ರಿಂದ ಇಂಡಿಯಾ ಒಕ್ಕೂಟದ ಪರ ಭಾರಿ ಬೆಂಬಲ ವ್ಯಕ್ತವಾಗಿದೆ. ಈಗಿನದು 2019ರ ಸ್ಥಿತಿಯಲ್ಲ. ಎಲ್ಲಾ ವರ್ಗದ ಜನರು ಕೂಡ ಈಗ ಇಂಡಿಯಾ ಕಡೆ ವಾಲಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ