ಪತ್ನಿಯ ಗರ್ಭವನ್ನೇ ಸೀಳಿದ ಕ್ರೂರಿಗೆ ಜೀವನಪರ್ಯಂತ ಶಿಕ್ಷೆ ವಿಧಿಸಿದ ಕೋರ್ಟ್ - Mahanayaka

ಪತ್ನಿಯ ಗರ್ಭವನ್ನೇ ಸೀಳಿದ ಕ್ರೂರಿಗೆ ಜೀವನಪರ್ಯಂತ ಶಿಕ್ಷೆ ವಿಧಿಸಿದ ಕೋರ್ಟ್

24/05/2024

ಪತ್ನಿ ಗರ್ಭ ಧರಿಸಿರುವುದು ಹೆಣ್ಣನ್ನೋ ಗಂಡನ್ನೋ ಎಂಬುದನ್ನು ತಿಳಿಯುವುದಕ್ಕಾಗಿ ಆಕೆಯ ಗರ್ಭಪಾತ್ರೆಯನ್ನೇ ಕತ್ತಿಯಿಂದ ಇರಿದು ಪರೀಕ್ಷಿಸಿದ್ದ ಕ್ರೂರಿಗೆ ನ್ಯಾಯಾಲಯ ಜೀವನಪರ್ಯಂತ ಶಿಕ್ಷೆ ವಿಧಿಸಿದೆ.


Provided by

ನಲವತ್ತಾರು ವರ್ಷದ ಪನ್ನಾ ಲಾಲ್ ಎಂಬವ 2020 ಸೆಪ್ಟೆಂಬರ್ ನಲ್ಲಿ ಈ ಕ್ರೂರ ಕೃತ್ಯವನ್ನು ಎಸಗಿದ್ದ್. ಉತ್ತರ ಪ್ರದೇಶದ ಬದಾವುನಿಯಲ್ಲಿ ಈ ಘಟನೆ ನಡೆದಿತ್ತು.
ಪನ್ನಾ ಲಾಲ್ ಮತ್ತು ಅನಿತಾ ದೇವಿ ದಂಪತಿಗೆ ಐವರು ಹೆಣ್ಣು ಮಕ್ಕಳು. ಪನ್ನಾ ಲಾಲ್ ಮೂಢ ನಂಬಿಕೆಯಲ್ಲಿ ಅಪಾರ ವಿಶ್ವಾಸ ಇಟ್ಟಿದ್ದ ವ್ಯಕ್ತಿಯಾಗಿದ್ದ. ತನಗೆ ಒಂದು ಗಂಡು ಮಗು ಬೇಕು ಅನ್ನುವುದು ಆತನ ಆಸೆಯಾಗಿತ್ತು. ಆರನೇ ಬಾರಿ ಪತ್ನಿ ಗರ್ಭ ಧರಿಸಿದಳು. ಈ ಮಗು ಕೂಡ ಹೆಣ್ಣು ಎಂದು ಓರ್ವ ಜ್ಯೋತಿಷಿ ಹೇಳಿದ್ದ. ಆದ್ದರಿಂದ ಗರ್ಭ ಚಿದ್ರ ಮಾಡುವಂತೆ ಆತ ಪತ್ನಿಗೆ ಒತ್ತಾಯಿಸಿದ್ದ. ಆದರೆ ಆಕೆ ನಿರಾಕರಿಸಿದ್ದಳು. ಈ ಕುರಿತಂತೆ ಉಂಟಾದ ತರ್ಕದ ನಡುವೆ ಆತ ಕತ್ತಿಯೊಂದನ್ನು ತಂದು ಪತ್ನಿಯ ಹೊಟ್ಟೆಯನ್ನು ಸೀಳಿದ. ಆಕೆಯ ಬೊಬ್ಬೆ ಕೇಳಿ ನೆರೆಹರೆಯವರು ಓಡಿ ಬಂದರು. ಗಂಭೀರಾವಸ್ಥೆಯಲ್ಲಿದ್ದ ಆಕೆಯನ್ನು ದೆಹಲಿಯ ಆಸ್ಪತ್ರೆಗೆ ಸಾಗಿಸಲಾಯಿತು. ಆಕೆ ಬದುಕಿ ಉಳಿದಳಾದರೂ ಆಕೆಯ ಗರ್ಭದಲ್ಲಿದ್ದ ಮಗು ಮೃತಪಟ್ಟಿತ್ತು.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ