ಪ್ರಜ್ವಲ್ ರೇವಣ್ಣ ತನಿಖೆಗೆ ಸಹಕರಿಸುತ್ತಾರೆ, ಕಾನೂನು ಹೋರಾಟ ಮುಂದುವರಿಸುತ್ತೇವೆ: ಪ್ರಜ್ವಲ್ ಪರ ವಕೀಲರಿಂದ ಹೇಳಿಕೆ - Mahanayaka
10:00 AM Saturday 23 - August 2025

ಪ್ರಜ್ವಲ್ ರೇವಣ್ಣ ತನಿಖೆಗೆ ಸಹಕರಿಸುತ್ತಾರೆ, ಕಾನೂನು ಹೋರಾಟ ಮುಂದುವರಿಸುತ್ತೇವೆ: ಪ್ರಜ್ವಲ್ ಪರ ವಕೀಲರಿಂದ ಹೇಳಿಕೆ

prajwal revanna case
31/05/2024


Provided by

ಬೆಂಗಳೂರು: ಪ್ರಜ್ವಲ್ ರೇವಣ್ಣ ಬಂಧನದ ಬಳಿಕ  ಪ್ರಜ್ವಲ್ ಪರ ವಕೀಲ ಅರುಣ್ ಕುಮಾರ್ ಅವರು ಹೇಳಿಕೆ ನೀಡಿದ್ದು,  ಪ್ರಜ್ವಲ್ ರೇವಣ್ಣ ತನಿಖೆಗೆ ಸಹಕರಿಸುತ್ತಾರೆ ಎಂದು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ನೆಗೆಟಿವ್ ಕ್ಯಾಂಪೇನ್ ಬೇಡ ಎಂದಿರುವ ಅವರು, ನಾವು ಕೋರ್ಟ್ ನಲ್ಲಿ ಕಾನೂನು ಹೋರಾಟ ಮುಂದುವರಿಸುತ್ತೇವೆ. ನಿರೀಕ್ಷಣ ಜಾಮೀನು ಅರ್ಜಿ ವಜಾ ಆಗುತ್ತೆ, ನಂತರ ರೆಗ್ಯುಲರ್ ಬೇಲ್ ಗೆ ಅರ್ಜಿ ಹಾಕ್ತೀವಿ ಅಂತ ಅವರು ತಿಳಿಸಿದ್ದಾರೆ.

ಇನ್ನೂ ಪ್ರಜ್ವಲ್ ಅವರನ್ನು ಭೇಟಿ ಮಾಡಿದ ವೇಳೆ, ರಾತ್ರಿ ಬಂದಿದ್ದೀನಿ, ತನಿಖೆಗೆ ಸಹಕಾರ ಕೊಡುತ್ತೇನೆ, ನಾನು ಸ್ವಯಂ ಪ್ರೇರಿತವಾಗಿಯೇ ಬಂದಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ ಎಂದು ಅರುಣ್ ತಿಳಿಸಿದರು.

ಸದ್ಯ ಜಾಮೀನು ಅರ್ಜಿ ಪೆಂಡಿಂಗ್ ಇದೆ ಅದರ ಬಗ್ಗೆ ಮಾತನಾಡುವುದಿಲ್ಲ ಎಂದಿರುವ ಅರುಣ್, ಪ್ರಜ್ವಲ್ ರೇವಣ್ಣ ತನಿಖೆಗೆ ಸಹಕಾರ ಕೊಡುತ್ತಾರೆ ಎಂದು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ