ಪ್ರಧಾನಿ ಮೋದಿಯವರು ಕಾನೂನು ಹಾಗೂ ನಿಯಮಗಳಿಗೆ ಒಳಪಟ್ಟಿಲ್ಲವೇ..? ದಿಗ್ವಿಜಯ್ ಸಿಂಗ್ ಪ್ರಶ್ನೆ - Mahanayaka
10:44 PM Tuesday 28 - October 2025

ಪ್ರಧಾನಿ ಮೋದಿಯವರು ಕಾನೂನು ಹಾಗೂ ನಿಯಮಗಳಿಗೆ ಒಳಪಟ್ಟಿಲ್ಲವೇ..? ದಿಗ್ವಿಜಯ್ ಸಿಂಗ್ ಪ್ರಶ್ನೆ

02/06/2024

ಪ್ರಧಾನಿ ಮೋದಿಯವರು ಕಾನೂನು ಹಾಗೂ ನಿಯಮಗಳಿಗೆ ಒಳಪಟ್ಟಿಲ್ಲವೇ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರ ಧ್ಯಾನಮಂದಿರದ ಭಾವಚಿತ್ರಗಳ ಕುರಿತು ಪ್ರಶ್ನೆ ಎತ್ತಿದ್ದಾರೆ. ಇದರೊಂದಿಗೆ, ಪ್ರಧಾನ ಮಂತ್ರಿಗಳ ಕಾರ್ಯಾಲಯವು ಈ ಕುರಿತು ಉತ್ತರ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಶನಿವಾರ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಎಕ್ಸ್ ಬಳಕೆದಾರರಾದ ಕಪಿಲ್ ಎಂಬುವವರ ಪೋಸ್ಟ್ ಅನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ದಿಗ್ವಿಜಯ್ ಸಿಂಗ್, ನರೇಂದ್ರ ಮೋದಿ ಕಾನೂನಿಗೆ ಒಳಪಟ್ಟಿಲ್ಲವೆ ಅಥವಾ ನಿಯಮಗಳು ಅವರಿಗೆ ಅನ್ವಯವಾಗುವುದಿಲ್ಲವೆ? ಈ ಕುರಿತು ಪ್ರಧಾನ ಮಂತ್ರಿಗಳ ಕಾರ್ಯಾಲಯವು ಪ್ರತಿಕ್ರಿಯಿಸುವುದೆ?” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಮೋದಿಯ ಧ್ಯಾನ ಭಂಗಿಯ ಭಾವಚಿತ್ರಗಳನ್ನು ಹಂಚಿಕೊಂಡಿದ್ದ ಕಪಿಲ್ ಎಂಬ ಬಳಕೆದಾರರೊಬ್ಬರು, “ವಿವೇಕಾನಂದ ಸ್ಮಾರಕದಲ್ಲಿ ಛಾಯಾಗ್ರಹಣ ನಡೆಸಲು ಅನುಮತಿಯಿಲ್ಲ ಹಾಗೂ ಕಾನೂನಿನ ಪ್ರಕಾರ, ಇದೊಂದು ದಂಡನಾರ್ಹ ಅಪರಾಧವಾಗಿದೆ. ಹೀಗಿದ್ದೂ ಇದೇ ಪ್ರಥಮ ಬಾರಿಗೆ ನೀವು ವಿವೇಕಾನಂದ ಸ್ಮಾರಕದಲ್ಲಿನ ಧ್ಯಾನಮಂದಿರದ ಭಾವಚಿತ್ರಗಳನ್ನು ನೋಡುತ್ತಿದ್ದೀರಿ. ಆದರೆ, ಕ್ಯಾಮೆರಾ ಇಲ್ಲದೆ ಕ್ಯಾಮೆರಾ ಜೀವಿ ಬದುಕುವುದಾದರೂ ಹೇಗೆ?” ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ