ಬೆಳ್ತಂಗಡಿ: ಮನೋಜ್ ಕಟ್ಟೆಮರ್ ಹುಟ್ಟುಹಬ್ಬ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ  ಹಣ್ಣು ಹಂಪಲು ವಿತರಣೆ - Mahanayaka

ಬೆಳ್ತಂಗಡಿ: ಮನೋಜ್ ಕಟ್ಟೆಮರ್ ಹುಟ್ಟುಹಬ್ಬ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ  ಹಣ್ಣು ಹಂಪಲು ವಿತರಣೆ

belthangady
06/06/2024


Provided by

ಬೆಳ್ತಂಗಡಿ : ಮನೋಜ್ ಕಟ್ಟೆಮರ್ ಇವರ ಹುಟ್ಟುಹಬ್ಬ ಪ್ರಯುಕ್ತ ಅಖಿಲ ಕರ್ನಾಟಕ ರಾಜ ಕೇಸರಿ   ಟ್ರಸ್ಟ್ (ರಿ ) ಬೆಳ್ತಂಗಡಿ ಇದರ ವತಿಯಿಂದ  ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ  ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ  ಬೆಳ್ತಂಗಡಿ  ತಾಲೂಕು   ಸಾರ್ವಜನಿಕ ಆಸ್ಪತ್ರೆಯ  ವೈದ್ಯಾಧಿಕಾರಿಯಾದ ಡಾ.ಚಂದ್ರಕಾಂತ್  ಇವರು,  ಮನೋಜ್ ಕಟ್ಟೆಮರ್  (ಧರ್ಮದರ್ಶಿಗಳು ಶ್ರೀಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮರ್) ಇವರ  ಹುಟ್ಟುಹಬ್ಬಕ್ಕೆ ಶುಭಕೋರಿ ಆಸ್ಪತ್ರೆಯಲ್ಲಿ  ಇರುವಂತಹ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

belthangady

ಈ ಸಂದರ್ಭದಲ್ಲಿ  ರಾಜ ಕೇಸರಿ  ಟ್ರಸ್ಟಿನ  ಸಂಸ್ಥಾಪಕರಾದ   ದೀಪಕ್ ಜಿ, ಬೆಳ್ತಂಗಡಿ, ರಾಜ ಕೇಸರಿ  ಸಂಘಟನೆಯ    ಗೌರವ ಸಲಹೆಗಾರದ ಪ್ರೇಮ್ ರಾಜ್  ರೋಷನ್, ರಾಜ ಕೇಸರಿ ಸಂಘಟನೆಯ  ಆರೋಗ್ಯ ಸಲಹೆಗಾರರಾದ  ಅಜಯ್ ಕಲ್ಲೇಗ,  ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಬೆಳ್ತಂಗಡಿ  ಮತ್ತು ರಾಜ ಕೇಸರಿ   ಸಂಘಟನೆಯ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ್ ಗುರುವನಕೆರೆ, ಸಾಮಾಜಿಕ ಜಾಲತಾಣದ ಸಂಪತ್, ಸದಸ್ಯರುಗಳಾದ  ರಾಜೇಶ್, ಶ್ರೀನಿವಾಸ್ ಮಂಜೊಟ್ಟಿ  ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ