ಉತ್ತರ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಫಲ ನೀಡಿದ ಅಖಿಲೇಶ್ ತಂತ್ರಗಾರಿಕೆ

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರ (ಪಿಡಿಎ ಪಿಚ್ಡಾ, ದಲಿತ್, ಅಲ್ಪಸಂಖ್ಯಾಕ್) ಕೇಂದ್ರಿತ ಚುನಾವಣಾ ತಂತ್ರಗಾರಿಕೆ ಉತ್ತರ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಫಲ ನೀಡಿದ್ದು, ಪಕ್ಷದಿಂದ ಹೊಸದಾಗಿ ಆಯ್ಕೆಯಾದ ಸಂಸದರ ಪೈಕಿ ಶೇಕಡ 86ರಷ್ಟು ಮಂದಿ ಹಿಂದುಳಿದ ವರ್ಗ, ದಲಿತ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದವರು.
ಸಮಾಜವಾದಿ ಪಕ್ಷದ 37 ಸಂಸದರ ಪೈಕಿ 20 ಮಂದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು. ಪರಿಶಿಷ್ಟ ಜಾತಿಯ ಎಂಟು ಮಂದಿ ಹಾಗೂ ಮುಸ್ಲಿಂ ಸಮುದಾಯದ ನಾಲ್ಕು ಮಂದಿ ಪಕ್ಷದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ, ಮೇಲ್ವರ್ಗಕ್ಕೆ ಸೇರಿದ ಬ್ರಾಹ್ಮಣ, ವೈಶ್ಯ ಸಮುದಾಯ ಮತ್ತು ಭುಮಿಹಾರ್ ಸಮುದಾಯದ ತಲಾ ಒಬ್ಬರು ಆಯ್ಕೆಯಾಗಿದ್ದರೆ, ಠಾಕೂರ್ ಸಮುದಾಯದ ಇಬ್ಬರು ಗೆಲುವು ಸಾಧಿಸಿದ್ದಾರೆ.
ಮೀರಠ್ ಮತ್ತು ಫೈಝಾಬಾದ್ ಕ್ಷೇತ್ರದಿಂದ ಪರಿಶಿಷ್ಟ ವರ್ಗದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಸಮಾಜವಾದಿ ಪಕ್ಷ, ಸಾಮಾನ್ಯ ಕ್ಷೇತ್ರದಿಂದ ದಲಿತರನ್ನು ಕಣಕ್ಕಿಳಿಸುವ ಹೊಸ ಪ್ರಯೋಗ ಮಾಡಿತ್ತು.
ಎಸ್ಪಿ ದಲಿತ ಅಭ್ಯರ್ಥಿ ಅವಧೇಶ್ ಪ್ರಸಾದ್ ಅವರು ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಲಲ್ಲು ಸಿಂಗ್ ಅವರನ್ನು 54,567 ಮತಗಳಿಂದ ಪರಾಭವಗೊಳಿಸಿದರೆ, ಮೀರಠ್ನಲ್ಲಿ ಪಕ್ಷ ಸುನಿತಾ ವರ್ಮಾ ಎಂಬ ದಲಿತ ಮಹಿಳೆಯನ್ನು ಕಣಕ್ಕೆ ಇಳಿಸಿತ್ತು. ಅವರು ಬಿಜೆಪಿಯ ಅರುಣ್ ಗೋವಿಲ್ ವಿರುದ್ಧ ಎಸ್ಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಮಂದಿ ಹಿಂದುಳಿದ ವರ್ಗದವರು, 19 ಮಂದಿ ಪರಿಶಿಷ್ಟರು ಹಾಗೂ ಆರು ಮುಸ್ಲಿಮರು ಸೇರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth