ಅಗ್ನಿವೀರ್ ಯೋಜನೆಯಲ್ಲಿ ಬದಲಾವಣೆ ಮಾಡಲು ಜೆಡಿಯು ಆಗ್ರಹ: ಬಿಜೆಪಿಗೆ ಕಸಿವಿಸಿ

ಪ್ರಬಲ ವಿಪಕ್ಷ ಆಡಳಿತ ಪಕ್ಷದ ಮೇಲೆ ಬೀರುತ್ತಿರುವ ಪ್ರಭಾವದ ಮೊದಲ ಮುನ್ಸೂಚನೆ ಸಿಕ್ಕಿದೆ. ಅಗ್ನಿವೀರ್ ಯೋಜನೆಯಲ್ಲಿ ಮಾರ್ಪಾಡುಗಳನ್ನು ಮಾಡುವಂತೆ ನಾವು ಕೋರುತ್ತಿದ್ದೇವೆ ಎಂದು ನಿತೀಶ್ ಕುಮಾರ್ ರ ಜೆಡಿಯು ಪಕ್ಷದ ವಕ್ತಾರ ಕೆ ಸಿ ತ್ಯಾಗಿ ಹೇಳಿದ್ದಾರೆ. ಅಗ್ನಿವೀರ ಯೋಜನೆಯ ಮಾರ್ಪಾಡು ಮಾಡುವ ಬಗ್ಗೆ ಕಾಂಗ್ರೆಸ್ ಪ್ರಚಾರ ಮಾಡಿತ್ತು.
ಜೊತೆ ಮಾತನಾಡಿದ ಜೆಡಿಯು ಪಕ್ಷದ ವಕ್ತಾರ ಕೆ ಸಿ ತ್ಯಾಗಿ “ಅಗ್ನಿವೀರ್ ಯೋಜನೆಯನ್ನು ಜಾರಿಗೊಳಿಸಿದ್ದಾಗಿನಿಂದ ಅದು ಭಾರೀ ಟೀಕೆಗೊಳಗಾಗಿದೆ. ಅದು ಚುನಾವಣೆಯಲ್ಲೂ ಪರಿಣಾಮ ಬೀರಿದೆ. ಸೇನೆಗೆ ನೇಮಕಾತಿಗಾಗಿ ಇರುವ ಈ ಅಗ್ನಿವೀರ್ ಯೋಜನೆಯಲ್ಲಿ ಬದಲಾವಣೆಗಳ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
“ಮತದಾರರ ಒಂದು ವರ್ಗ ಈ ಅಗ್ನಿವೀರ್ ಯೋಜನೆಯಿಂದ ಅಸಂತುಷ್ಟವಾಗಿದೆ. ಜನರು ಪ್ರಶ್ನಿಸುತ್ತಿರುವ ಈ ಯೋಜನೆಯ ಕೆಲವೊಂದು ಲೋಪಗಳನ್ನು ವಿವರವಾಗಿ ಚರ್ಚಿಸಿ ಅವುಗಳನ್ನು ಸರಿಪಡಿಸುವುದು ನಮಗೆ ಬೇಕಿದೆ, ಸಮಾನ ನಾಗರಿಕ ಸಂಹಿತೆ ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿ ತಿಳಿಸಿದ ಹಾಗೆ ನಾವು ಅದರ ವಿರುದ್ಧವಲ್ಲ, ಆದರೆ ಎಲ್ಲಾ ಸಂಬಂಧಿತರ ಜೊತೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ” ಎಂದು ತ್ಯಾಗಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth