ನೀಟ್ ವಿವಾದ: ಮರುಪರೀಕ್ಷೆ ಅನಿವಾರ್ಯವಾದ್ರೆ ನಡೆಸ್ತೀವಿ ಎಂದ ಎನ್‌ಟಿಎ ನಿರ್ದೇಶಕ - Mahanayaka

ನೀಟ್ ವಿವಾದ: ಮರುಪರೀಕ್ಷೆ ಅನಿವಾರ್ಯವಾದ್ರೆ ನಡೆಸ್ತೀವಿ ಎಂದ ಎನ್‌ಟಿಎ ನಿರ್ದೇಶಕ

08/06/2024


Provided by

ಈ ವರ್ಷದ ನೀಟ್‌ ವಿವಾದದ ಕುರಿತಂತೆ ಮಾತನಾಡಿರುವ ಎನ್‌ಟಿಎ ನಿರ್ದೇಶಕರು, “ಮರುಪರೀಕ್ಷೆ ನಡೆಸಬೇಕೆಂದು ದೂರು ನಿವಾರಣ ಸಮಿತಿಗೆ ಅನಿಸಿದರೆ, ಅದನ್ನು ನಡೆಸಲಾಗುವುದು” ಎಂದಿದ್ದಾರೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದನ್ನು ನಿರಾಕರಿಸಿರುವ ಅವರು, ಗ್ರೇಸ್‌ ಅಂಕ ನೀಡಿರುವುದು ಒಟ್ಟಾರೆ ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ನೀಟ್‌ ಫಲಿತಾಂಶಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಹಲವಾರು ಸಂಬಂಧಿತರು ಆಕ್ಷೇಪ ಮತ್ತು ಕಳವಳ ವ್ಯಕ್ತಪಡಿಸಿರುವ ನಡುವೆ ಎನ್‌ಟಿಎ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಹೊಸದಾಗಿ ರಚಿಸಲಾದ ಸಮಿತಿಯ ಶಿಫಾರಸುಗಳಂತೆಯೇ ಯಾವುದಾದರೂ ನಿರ್ಧಾರ ಕೈಗೊಳ್ಳಲಾಗುವುದು, ಹರ್ಯಾಣದ ಒಂದೇ ಕೇಂದ್ರದ ಆರು ಮಂದಿ ಅಗ್ರ ರ್ಯಾಂಕ್‌ ಪಡೆದಿರುವುದೂ ಹಲವಾರು ಪ್ರಶ್ನೆಗಳನ್ನೆತ್ತಿದೆ ಎಂದಿದ್ದಾರೆ.

ಪರಿಶೀಲನೆಯಲ್ಲಿರುವ 1,600 ವಿದ್ಯಾರ್ಥಿಗಳ ಫಲಿತಾಂಶಗಳನ್ನು ಮರುಬಿಡುಗಡೆಗೊಳಿಸುವುದು ಪ್ರವೇಶಾತಿ ಪ್ರಕ್ರಿಯೆಯನ್ನು ಬಾಧಿಸದು ಎಂದು ಎನ್‌ಟಿಎ ನಿರ್ದೇಶಕರು ಹೇಳಿದ್ದಾರೆ.

ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ ಹಾಗೂ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದೆ. ನೀಟ್‌ ಫಲಿತಾಂಶಗಳಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕೆಂದು ಕೇರಳ, ಕರ್ನಾಟಕ ಕಾಂಗ್ರೆಸ್‌ ಆಗ್ರಹಿಸಿವೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ