ಮುಸ್ಲಿಂ ಯುವಕರನ್ನು ಥಳಿಸಿ ಹತ್ಯೆ ಮಾಡಿದ ಗೋರಕ್ಷಕ ಗೂಂಡಾಗಳು

ಛತ್ತೀಸ್ ಗಢದ ರಾಯಪುರದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಗೋರಕ್ಷಕ ಗೂಂಡಾಗಳು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಟ್ರಕ್ ನಲ್ಲಿ ಎಮ್ಮೆ ಮತ್ತು ಎತ್ತುಗಳನ್ನು ಸಾಗಿಸುತ್ತಿದ್ದ ವೇಳೆ ಈ ಕ್ರೌರ್ಯ ನಡೆದಿದೆ. ಉತ್ತರ ಪ್ರದೇಶದ ಸಹರಾಂಪುರ್ ಪ್ರದೇಶದ ನಿವಾಸಿಗಳಾದ ಚಾಂದ್ ಮಿಯಾ ಮತ್ತು ಗುಡ್ಡು ಖಾನ್ ಎಂಬವರನ್ನು ಹತ್ಯೆ ಮಾಡಲಾಗಿದೆ. ಇವರ ಜೊತೆ ಇದ್ದ ಸದ್ದಾಮ್ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಮಹಾಸಮುಂದಿ ಗ್ರಾಮದಿಂದ ಎಮ್ಮೆ ಮತ್ತು ಎತ್ತುಗಳನ್ನು ಓಡಿಸ್ಸಾದ ಚಂದ ಎಂಬ ಪ್ರದೇಶಕ್ಕೆ ಕೊಂಡು ಹೋಗುತ್ತಿದ್ದರು ಎಂದು ಅರಂಗ್ ಪೊಲೀಸ್ ಸ್ಟೇಷನ್ ನ ಇಂಚಾರ್ಜ್ ಶೈಲೇಂದ್ರ ಸಿಂಗ್ ಶ್ಯಾಮ್ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ. ಈ ನಡುವೆ ಇವರ ಟ್ರಕ್ ಅನ್ನು ಗೋರಕ್ಷಕ ಗೂಂಡಾಗಳು ಬೆನ್ನಟ್ಟಿದರು. ತೆಲಾಂಗ ಸೇತುವೆಯಲ್ಲಿ ಇವರು ರಸ್ತೆಗೆ ಆಣಿಗಳನ್ನು ನೆಟ್ಟಿದ್ದರು. ಟ್ರಕ್ ಇದರ ಮೇಲೆ ಚಲಿಸುತ್ತಿದ್ದಂತೆಯೇ ಟೈಯರ್ ಪಂಚರ್ ಆಗಿದೆ. ಬಳಿಕ ಸುಮಾರು 12ರಷ್ಟು ಮಂದಿ ಈ ಟ್ರಕ್ ನಲ್ಲಿ ಇದ್ದವರನ್ನು ಹೊರಗೆಳೆದು ಕ್ರೂರವಾಗಿ ಥಳಿಸಿದರು ಎಂದು ಶ್ಯಾಮ್ ಹೇಳಿದ್ದಾರೆ. ಚಾಂದ್ ಮಿಯ ಮತ್ತು ಗುಡ್ಡು ಖಾನ್ ರನ್ನು ಟ್ರಕ್ ನಿಂದ ಹೊರಗೆಳೆದು ಥಳಿಸಿದ್ರು ಎಂದು ಆಸ್ಪತ್ರೆಯಲ್ಲಿರುವ ಸದ್ದಾಮ್ ಹೇಳಿದ್ದಾರೆ. ಮಿಯಾ ಸ್ಥಳದಲ್ಲೇ ಮೃತ ಪಟ್ಟರೆ ಗುಡ್ಡು ಆಸ್ಪತ್ರೆಯಲ್ಲಿ ಮೃತಪಟ್ಟರು.
ಗಂಭೀರ ಸ್ಥಿತಿಯಲ್ಲಿರುವ ಸದ್ದಾಮ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು ನಾಲ್ಕು ಮಂದಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth