ಅಸ್ಸಾಂ‌ ಸರ್ಕಾರದಿಂದ ಮತ್ತೆ ಮುಸ್ಲಿಂ ವಿರೋಧಿ ನೀತಿ: 400 ಮುಸ್ಲಿಂ ಕುಟುಂಬದ ಮನೆ ತೆರವು - Mahanayaka

ಅಸ್ಸಾಂ‌ ಸರ್ಕಾರದಿಂದ ಮತ್ತೆ ಮುಸ್ಲಿಂ ವಿರೋಧಿ ನೀತಿ: 400 ಮುಸ್ಲಿಂ ಕುಟುಂಬದ ಮನೆ ತೆರವು

10/06/2024


Provided by

ಮುಸ್ಲಿಂ ವಿರೋಧಿ ನೀತಿಯನ್ನು ಅಸ್ಸಾಂ ಸರಕಾರ ಮುಂದುವರಿಸಿದೆ. ದರ್ರಾಂಗ್ ಜಿಲ್ಲೆಯ ಬ್ರಹ್ಮಪುತ್ರ ನದಿ ತಟದ ದಲ್ಪುರ್ ಚಾರ್ ನಲ್ಲಿ ನೆಲೆಗೊಂಡಿದ್ದ ಸುಮಾರು 400 ಬಂಗಾಳಿ ಮೂಲದ ಮುಸ್ಲಿಂ ಕುಟುಂಬವನ್ನು ತೆರವುಗೊಳಿಸಿದೆ. 2021 ಸೆಪ್ಟೆಂಬರ್ ನಲ್ಲಿ ಅಸ್ಸಾಮ್ ಸರ್ಕಾರ ಮುಸ್ಲಿಮರನ್ನು ಹೀಗೆ ತೆರವುಗೊಳಿಸುವಾಗ ಘರ್ಷಣೆ ನಡೆದಿತ್ತು.

ಆ ಸಂದರ್ಭದಲ್ಲಿ 1418 ಮನೆಗಳನ್ನು ನೆಲಸಮಗೊಳಿಸಲಾಗಿತ್ತು. 48 ಶಾಪ್ ಗಳು ಮತ್ತು ಮೂರು ಮಸೀದಿಗಳನ್ನು ಧ್ವಂಸಗೊಳಿಸಲಾಗಿತ್ತು. ಸುಮಾರು ಏಳು ಸಾವಿರದಷ್ಟು ಮಂದಿ ಮನೆ ಕಳಕೊಂಡಿದ್ದರು.
ಸ್ಥಳೀಯರ ಪ್ರಕಾರ ಮನೆ ತೆರವುಗೊಳಿಸುವಂತೆ ಮೇ 18 ರಂದು ನೋಟಿಸು ನೀಡಲಾಗಿದೆ. ಮೇ 20ರಂದು ಇವರ ಮನೆಗಳನ್ನು ಬುಲ್ಡೋಜರ್ ಮೂಲಕ ಉರುಳಿಸಲಾಗಿದೆ.

ಅಸ್ಸಾಂ ಸರಕಾರದ ಈ ಕ್ರಮದ ಬಗ್ಗೆ ಭಾರಿ ಆಕ್ರೋಶವೂ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿ ಮಾಡಿಕೊಂಡು ಮಾಡಲಾಗುವ ಈ ಕಾನೂನು ಬಾಹಿರ ಕೃತ್ಯವನ್ನು ಮಾನವ ಹಕ್ಕು ಸಂಘಟನೆಗಳು ಖಂಡಿಸಿವೆ. ಬೀದಿಗೆ ಬಿದ್ದಿರುವ ಮುಸ್ಲಿಂ ಸಮುದಾಯದ ಬದುಕು ಮತ್ತು ಇತರ ಅಗತ್ಯಗಳನ್ನು ಕಡೆಗಣಿಸಲಾಗಿರುವುದನ್ನು ಪ್ರಶ್ನಿಸಲಾಗಿದೆಯಲ್ಲದೆ ಅವರಿಗೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ