ಮೋದಿ ಹೊಸ ಸಂಪುಟದಲ್ಲಿ ಹಿಂದಿನ 37 ಸಚಿವರಿಗೆ ಕೋಕ್: ಕಾರಣ ಏನು..? - Mahanayaka

ಮೋದಿ ಹೊಸ ಸಂಪುಟದಲ್ಲಿ ಹಿಂದಿನ 37 ಸಚಿವರಿಗೆ ಕೋಕ್: ಕಾರಣ ಏನು..?

10/06/2024


Provided by

ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಸಚಿವ ಸಂಪುಟದಿಂದ ಒಟ್ಟು 37 ಹಿಂದಿನ ಸಚಿವರನ್ನು ಕೈಬಿಡಲಾಗಿದೆ. ಸಚಿವರಾಗಿದ್ದ ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಹಾಗೂ ನಾರಾಯಣ್ ರಾಣೆ ಅವಕಾಶ ವಂಚಿತರಾಗಿದ್ದಾರೆ.

ಇವರೊಂದಿಗೆ ಪರ್ಶೋತ್ತಮ್ ರುಪಾಲ, ಅರ್ಜುನ್ ಮುಂಡಾ, ಆರ್.ಕೆ.ಸಿಂಗ್ ಹಾಗೂ ಮಹೇಂದ್ರ ನಾಥ ಪಾಂಡೆ ಕೂಡಾ ಸಂಪುಟ ಸಚಿವ ಸ್ಥಾನವನ್ನು ಹೊಂದಿದ್ದರು. ಆದರೆ, ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವ ಸಂಪುಟದಲ್ಲಿ ಇವರಿರಲಿಲ್ಲ. ಎಲ್ಲ 30 ಮಂದಿ ಸ್ವತಂತ್ರ ನಿರ್ವಹಣೆಯ ಸಚಿವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದ್ದರೂ, 42 ಮಂದಿ ರಾಜ್ಯ ಸಚಿವರ ಪೈಕಿ 30 ಮಂದಿ ಸಚಿವರನ್ನು ಕೈಬಿಡಲಾಗಿದೆ.

ಸಚಿವ ಸಂಪುಟದಿಂದ ಕೈಬಿಡಲಾಗಿರುವ ಸಚಿವರ ಪೈಕಿ 18 ಮಂದಿ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ, ಸಚಿವ ಸಂಪುಟದಲ್ಲಿ ಸ್ಥಾನ ಉಳಿಸಿಕೊಂಡಿರುವ ಏಕೈಕ ರಾಜ್ಯ ಸಚಿವ ಎಲ್‍.ಮುರುಗನ್ ಆಗಿದ್ದಾರೆ. ಅವರು ಈಗಾಗಲೇ ರಾಜ್ಯಸಭಾ ಸದಸ್ಯರಾಗಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ