ವಿ.ಸೋಮಣ್ಣಗೆ ಜಲಶಕ್ತಿ ಖಾತೆ ನೀಡಿರುವುದಕ್ಕೆ ತಮಿಳುನಾಡು ಅಸಮಾಧಾನ: ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು?

ಬೆಂಗಳೂರು : ಕೇಂದ್ರ ಎನ್ ಡಿಎ ಮೈತ್ರಿ ಕೂಟ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕರ್ನಾಟಕದ 5 ಸಂಸದರು ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ವಿ. ಸೋಮಣ್ಣ, ಎಚ್ ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ಮತ್ತು ಪ್ರಲ್ಹಾದ್ ಜೋಶಿ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕರ್ನಾಟಕ ಮೂಲದ ವಿ.ಸೋಮಣ್ಣ ಅವರಿಗೆ ಜಲಶಕ್ತಿ ಹಾಗೂ ರೈಲ್ವೇ ಇಲಾಖೆಯ ರಾಜ್ಯ ಸಚಿವ ಸ್ಥಾನ ನೀಡಿರುವುದಕ್ಕೆ ತಮಿಳುನಾಡು ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಸೋಮಣ್ಣಗೆ ಜಲಶಕ್ತಿ ಇಲಾಖೆಯನ್ನು ನೀಡಿದ್ದಕ್ಕೆ ತಮಿಳುನಾಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕ—ತಮಿಳುನಾಡು ನೀರಿನ ವಿವಾದದ ನಡುವೆ, ಕರ್ನಾಟಕ ಮೂಲದ ಸೋಮಣ್ಣಗೆ ಜಲಶಕ್ತಿ ಇಲಾಖೆ ನೀಡಿರುವುದು ತಮಿಳುನಾಡಿಗೆ ಆತಂಕ ಉಂಟು ಮಾಡಿದೆ.
ಈ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೋಮಣ್ಣಗೆ ಜಲಶಕ್ತಿ ಇಲಾಖೆಯನ್ನು ನೀಡಿರುವುದನ್ನು ಸಮರ್ಥಿಸಿಕೊಂಡಿದ್ದು, ತಮಿಳುನಾಡಿನ ಆಕ್ಷೇಪಕ್ಕೆ ನನ್ನ ವಿರೋಧವಿದೆ ಎಂದು ಹೇಳಿದ್ದಾರೆ.
ಸೋಮಣ್ಣ ಅವರನ್ನು ಮಂತ್ರಿಯಾಗಿ ನೇಮಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರ. ಅದನ್ನು ನಾವು ಪ್ರಶ್ನಿಸಲು ಬರುವುದಿಲ್ಲ. ವಿ ಸೋಮಣ್ಣನವರು ಕರ್ನಾಟಕದವರಾಗಿರಬಹುದು, ಆದರೆ ಅವರು ಕೇಂದ್ರದ ಸಚಿವರು. ಹಾಗಾಗಿ, ಅವರನ್ನು ಒಂದು ರಾಜ್ಯಕ್ಕೆ ಸೀಮಿತಗೊಳಿಸಲು ಬರುವುದಿಲ್ಲ ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97