ತನ್ನ ಮಗನನ್ನೇ ಕತ್ತು ಹಿಸುಕಿ‌ ಕೊಂದ ಮಾನಸಿಕ ಅಸ್ವಸ್ಥೆ: ಡೆಡ್ ಬಾಡಿಯನ್ನು ಸುಡಲು ಯತ್ನಿಸಿದ ತಾಯಿ - Mahanayaka

ತನ್ನ ಮಗನನ್ನೇ ಕತ್ತು ಹಿಸುಕಿ‌ ಕೊಂದ ಮಾನಸಿಕ ಅಸ್ವಸ್ಥೆ: ಡೆಡ್ ಬಾಡಿಯನ್ನು ಸುಡಲು ಯತ್ನಿಸಿದ ತಾಯಿ

13/06/2024


Provided by

ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ತನ್ನ ನಾಲ್ಕು ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ಆದೇಶ್ ದೇವಿ ಮೊದಲು ಮಗುವಿನ ಕತ್ತು ಸೀಳಿ ನಂತರ ಶವವನ್ನು ಮನೆಯೊಳಗಿನ ಒಲೆಯ ಮೇಲೆ ಸುಡಲು ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವಿ ಅವರ ಪತಿ ಕಪಿಲ್ ಕುಮಾರ್ ಕೆಲಸದಿಂದ ಮನೆಗೆ ಹಿಂದಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದನ್ನು ನೋಡಿ ಆಘಾತಕ್ಕೊಳಗಾದ ಕುಮಾರ್ ತಕ್ಷಣ ಸಹಾಯಕ್ಕಾಗಿ ಕುಟುಂಬ ಸದಸ್ಯರನ್ನು ಕರೆದಿದ್ದಾರೆ.
ಕುಟುಂಬ ಸದಸ್ಯರು ಬಂದಾಗ, ಆರೋಪಿ ದೇವಿ ಸಲಿಕೆಯಿಂದ ಅವರನ್ನು ಮತ್ತು ಕುಮಾರ್ ಅವರನ್ನು ಮನೆಯಿಂದ ಓಡಿಸಿದ್ದಾಳೆ.

ಪತಿ ಈ ಭೀಕರ ಘಟನೆಯ ಬಗ್ಗೆ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಮ್ ಅರ್ಜ್ ಮತ್ತು ಚಂದ್ಪುರ್ ಸರ್ಕಲ್ ಆಫೀಸರ್ ಭರತ್ ಸೋಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಮಾರ್ ಅವರ ದೂರಿನ ಆಧಾರದ ಮೇಲೆ ದೇವಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ