ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರಿಗೆ ಪಿ.ಎಚ್‌.ಡಿ. ಪದವಿ ಪ್ರದಾನ - Mahanayaka

ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರಿಗೆ ಪಿ.ಎಚ್‌.ಡಿ. ಪದವಿ ಪ್ರದಾನ

venkatesh gm
16/06/2024


Provided by

ಬೆಂಗಳೂರು: ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಎಸ್. ಪುಟ್ಟಸ್ವಾಮಯ್ಯ ರವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್ ಇನ್ ಕರ್ನಾಟಕ: ಎ ಕೇಸ್ ಸ್ಟಡಿ ಆಫ್ ತುಮಕೂರು ಡಿಸ್ಟ್ರಿಕ್ಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ.

ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಗುಜ್ಜನಹಳ್ಳಿ ಗ್ರಾಮದ ನಿವಾಸಿಯಾದ ದಿವಂಗತ ಗಡ್ಡೂರು ಮುನಿಯಪ್ಪ, ದಾಸನ್ನನವರ ವೆಂಕಟಮ್ಮ ಎಂಬ ದಂಪತಿಗಳ ಪುತ್ರ ವೆಂಕಟೇಶ್ ಜಿ.ಎಂ.ರವರು ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್ ಇನ್ ಕರ್ನಾಟಕ: ಎ ಕೇಸ್ ಸ್ಟಡಿ ಆಫ್ ತುಮಕೂರು ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯವು ಪದವಿಯನ್ನು ಪ್ರಧಾನ ಮಾಡುವ ಮೂಲಕ ಗೌರವಿಸಿದೆ. ವೆಂಕಟೇಶ್ ಜಿ.ಎಂ. ಅವರಿಗೆ ಪಿಎಚ್‌.ಡಿ ಪದವಿ ಲಭಿಸಿರುವ ಹಿನ್ನಲೆ ಶಿಕ್ಷಕರು, ಸ್ನೇಹಿತ ಬಳಗ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ