ಕೇವಲ 6 ತಿಂಗಳು ಬದುಕಿರುತ್ತೀಯಾ ಎಂದಿದ್ದರು ವೈದ್ಯರು, ಆದ್ರೆ ಇಂದು 257 ದೇಶಗಳನ್ನು ಸುತ್ತಿದ ಪ್ರವಾಸಿ!
ನವದೆಹಲಿ: ಯಾವುದೇ ಸಾಧನೆ ಮಾಡಲು ಬಲವಾದ ಇಚ್ಛಾಶಕ್ತಿ ಒಂದಿದ್ದರೆ ಸಾಕು ಎಂಬುದಕ್ಕೆ ಭಾರತದ ಬೆನ್ನಿ ಪ್ರಸಾದ್ (Benny Prasad) ಅವರೇ ಜೀವಂತ ಉದಾಹರಣೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇವರ ಜೀವನ ಕಥೆ ಪ್ರತಿಯೊಬ್ಬರಲ್ಲೂ ಹೊಸ ಭರವಸೆಯನ್ನು ಮೂಡಿಸುವಂತಿದೆ.
ಒಂದು ಕಾಲದಲ್ಲಿ ವೈದ್ಯರಿಂದ “ನೀನು ಇನ್ನು ಕೇವಲ 6 ತಿಂಗಳು ಮಾತ್ರ ಬದುಕಲು ಸಾಧ್ಯ” ಎಂಬ ಆಘಾತಕಾರಿ ಮಾತನ್ನು ಕೇಳಿದ್ದ ಬೆನ್ನಿ ಪ್ರಸಾದ್, ಇಂದು ವಿಶ್ವದ ಬರೋಬ್ಬರಿ 257 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡಿ ಜಾಗತಿಕ ದಾಖಲೆ ಬರೆದಿದ್ದಾರೆ!
ಬೆನ್ನಿ ಪ್ರಸಾದ್ ಅವರು ಕೇವಲ ವಿಶ್ವ ದಾಖಲೆ ಬರೆಯಬೇಕು ಎಂಬ ಉದ್ದೇಶದಿಂದ ಪ್ರವಾಸ ಆರಂಭಿಸಿದವರಲ್ಲ. ಶ್ರೀಲಂಕಾಕ್ಕೆ ಕೈಗೊಂಡ ಒಂದು ಸಣ್ಣ ಪ್ರವಾಸ ಅವರ ಇಡೀ ಜೀವನದ ದೃಷ್ಟಿಕೋನವನ್ನೇ ಬದಲಾಯಿಸಿತು. ಅಲ್ಲಿಂದ ಆರಂಭವಾದ ಇವರ ಪಯಣ ಬರೋಬ್ಬರಿ 257 ದೇಶಗಳನ್ನು ತಲುಪುವಂತೆ ಮಾಡಿತು.
ಈ ಸುದೀರ್ಘ ಪ್ರಯಾಣದಲ್ಲಿ ಅವರು ಮಾನವೀಯತೆ, ವಿವಿಧ ಸಂಸ್ಕೃತಿಗಳು ಮತ್ತು ನಮ್ಮ ದೇಶದ ಮಹತ್ವವನ್ನು ಹತ್ತಿರದಿಂದ ಅರಿತುಕೊಂಡಿದ್ದಾರೆ.16 ಪಾಸ್ ಪೋರ್ಟ್‌ಗಳು, ಸಾವಿರಾರು ವೀಸಾ ಸ್ಟ್ಯಾಂಪ್ ಗಳು! ವಿಶ್ವದ ಮೂಲೆ ಮೂಲೆಗೂ ಪ್ರಯಾಣಿಸಿರುವ ಬೆನ್ನಿ ಪ್ರಸಾದ್ ಅವರ ಸಾಹಸ ಎಷ್ಟು ದೊಡ್ಡದು ಎಂದರೆ, ಅವರ ಪ್ರವಾಸದ ವೀಸಾ ಮತ್ತು ಇಮಿಗ್ರೇಷನ್ ಸ್ಟ್ಯಾಂಪ್ ಗಳನ್ನು ಹಾಕಿಸಿಕೊಳ್ಳಲು ಬರೋಬ್ಬರಿ 16 ಭಾರತೀಯ ಪಾಸ್ ಪೋರ್ಟ್‌ಗಳು ಭರ್ತಿಯಾಗಿವೆ! ಪ್ರಸ್ತುತ ಇವರ ಈ ಅಸಾಮಾನ್ಯ ಸಾಧನೆಯ ಕಥೆ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ.
ತಮ್ಮ ಕಾಯಿಲೆಯನ್ನು ಗೆದ್ದು, ಪ್ರಪಂಚವನ್ನೇ ಸುತ್ತಿರುವ ಬೆನ್ನಿ ಪ್ರಸಾದ್ ಅವರ ಮಾತುಗಳಲ್ಲೇ ಹೇಳುವುದಾದರೆ—”ನನ್ನ ಬದುಕು ಮುಗಿದೇ ಹೋಯಿತು ಅಂದುಕೊಂಡ ಜಾಗದಿಂದಲೇ ನನ್ನ ಹೊಸ ಪಯಣ ಆರಂಭವಾಯಿತು.”
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD





























