ಹಜ್ ಯಾತ್ರೆ ಹೆಸ್ರಲ್ಲಿ ಹಣ ವಂಚನೆ: 400ಕ್ಕಿಂತಲೂ ಹೆಚ್ಚು ಏಜೆಂಟರುಗಳ ಬಂಧನ - Mahanayaka

ಹಜ್ ಯಾತ್ರೆ ಹೆಸ್ರಲ್ಲಿ ಹಣ ವಂಚನೆ: 400ಕ್ಕಿಂತಲೂ ಹೆಚ್ಚು ಏಜೆಂಟರುಗಳ ಬಂಧನ

26/06/2024


Provided by

ಹಜ್ ಯಾತ್ರೆಗೆ ಕರ್ಕೊಂಡು ಹೋಗುತ್ತೇವೆ ಎಂದು ಹೇಳಿ ವಂಚಿಸಿದ 400ಕ್ಕಿಂತಲೂ ಹೆಚ್ಚಿನ ಏಜೆಂಟರುಗಳನ್ನು ಈಜಿಪ್ಟಿನಲ್ಲಿ ಬಂಧಿಸಲಾಗಿದೆ. ಹಜ್ ಯಾತ್ರೆಗೆ ಬೇಕಾದ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ವಾಗ್ದಾನ ಮಾಡಿ ಜನರನ್ನು ವಿಸಿಟಿಂಗ್ ವೀಸಾದಲ್ಲಿ ಸೌದಿಗೆ ತಲುಪಿಸಿ ವಂಚಿಸಿದವರನ್ನು ಹೀಗೆ ಅರೆಸ್ಟ್ ಮಾಡಲಾಗಿದೆ.

16 ಟೂರಿಸಂ ಕಂಪನಿಗಳ ಲೈಸೆನ್ಸ್ ಗಳನ್ನು ರದ್ದು ಮಾಡಿರುವುದಾಗಿಯೂ ಈಜಿಫ್ಟ್ ತಿಳಿಸಿದೆ. ವಿಸಿಟಿಂಗ್ ವೀಸಾದ ಮೂಲಕ ಈಜಿಪ್ಟ್ ನಾಗರಿಕರನ್ನು ಸೌದಿಯಲ್ಲಿ ಇಳಿಸಿದ ಬಳಿಕ ಏಜೆಂಟರುಗಳು ಕಾಣೆಯಾಗುತ್ತಾರೆ. ಮಕ್ಕಾದ ಅತಿ ತಾಪಮಾನದ ಕಾರಣದಿಂದಾಗಿ ಹಜ್ ಗೆ ತಲುಪಿದ ಸಾವಿರಕ್ಕಿಂತಲೂ ಅಧಿಕ ಮಂದಿ ಮೃತರಾಗಿದ್ದರು. ಇವರಲ್ಲಿ ಹೆಚ್ಚಿನವರು ಈಜಿಪ್ಟಿಯನ್ನರಾಗಿದ್ದಾರೆ. ಮೃತರಲ್ಲಿ 83% ಮಂದಿ ಕೂಡ ಹಜ್ ಪರ್ಮಿಟ್ ಇಲ್ಲದೆ ಸೌದಿಗೆ ಬಂದವರು ಎಂದು ಸೌದಿ ಹಜ್ ಸಚಿವಾಲಯ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ