T20 ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ವೇಳೆ  ಅವಘಡ:  ಧ್ವಜ ಕಂಬದಿಂದ ಕೆಳಗೆ ಬಿದ್ದ ಕ್ರಿಕೆಟ್ ಅಭಿಮಾನಿ - Mahanayaka
10:09 PM Thursday 21 - August 2025

T20 ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ವೇಳೆ  ಅವಘಡ:  ಧ್ವಜ ಕಂಬದಿಂದ ಕೆಳಗೆ ಬಿದ್ದ ಕ್ರಿಕೆಟ್ ಅಭಿಮಾನಿ

t20 world cup
30/06/2024


Provided by

ಲಂಡನ್: ಭಾರತ T20 ವಿಶ್ವಕಪ್ ಗೆದ್ದ ಸಂಭ್ರಮಾಚರಣೆಗೆ ವರ್ಣ ಧ್ವಜವನ್ನು ಕಟ್ಟಲು ಪ್ರಯತ್ನಿಸುತ್ತಿರುವಾಗ ಕ್ರಿಕೆಟ್​ ಅಭಿಮಾನಿಯೊಬ್ಬ ಕಂಬದಿಂದ ಬಿದ್ದು ಗಾಯಗೊಂಡಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.

ಕ್ವೀನ್ಸ್‌ ಬರಿ ಟ್ಯೂಬ್ ಸ್ಟೇಷನ್‌ ನ ಹೊರಗಿನ  ಪ್ರದೇಶದಲ್ಲಿ ಲಂಡನ್ ನಲ್ಲಿರುವ ಭಾರತೀಯರು ಸಂಭ್ರಮಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ತ್ರಿವರ್ಣ ಧ್ವಜ ಹಾರಿಸಲು ಕಂಬವೊಂದಕ್ಕೆ ಕೆಲ ಯುವಕರು ಹತ್ತಿದ್ದು, ಈ ಪೈಕಿ ಒಬ್ಬ ಯುವಕ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.

ಅದೃಷ್ಟವಶಾತ್ ಕೆಳಗೆ ಬಿದ್ದ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನೆಲಕ್ಕೆ ಬಿದ್ದು ಕೆಲ ಹೊತ್ತಿನಲ್ಲೇ ಸುಧಾರಿಸಿಕೊಂಡ ಕ್ರಿಕೆಟ್ ಅಭಿಮಾನಿ ಬಳಿಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾನೆ. ಆತನ ಮುಖಕ್ಕೆ ಸ್ವಲ್ಪ ಗಾಯಗಳಾಗಿತ್ತು.

ಬ್ರಿಡ್ಜ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 13 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದು ಬೀಗಿದೆ. ಈ ಖುಷಿಯಲ್ಲಿ  ಭಾರತೀಯರು ವಿಶ್ವದಾದ್ಯಂತ ಸಂಭ್ರಮ ಆಚರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ