ತನಗೆ ಕಚ್ಚಿದ ಹಾವಿಗೆ ತಿರುಗಿ ಕಚ್ಚಿ ಕೊಂದು ಹಾಕಿದ ಕಾರ್ಮಿಕ!

ಪಾಟ್ನಾ: ತನಗೆ ಕಚ್ಚಿದ ಹಾವನ್ನು ಹಿಡಿದ ರೈಲ್ವೆ ಮಾರ್ಗ ಕಾರ್ಮಿಕನೊಬ್ಬ ಹಾವಿಗೆ ತಿರುಗಿ ಕಚ್ಚಿ ಕೊಂದು ಹಾಕಿರುವ ವಿಚಿತ್ರ ಘಟನೆಯೊಂದು ನಡೆದಿದ್ದು, ಹಾವಿಗೆ ತಾನು ಕಚ್ಚಿ ಕೊಂದಿದ್ದೇಕೆ ಎನ್ನುವುದಕ್ಕೆ ಕಾರ್ಮಿಕ ವಿಚಿತ್ರ ಕಾರಣ ನೀಡಿದ್ದಾನೆ.
ಬಿಹಾರದ ನವಾಡದ ರಾಜೌಲಿ ಪ್ರದೇಶದಲ್ಲಿ ಈ ವಿಚಿತ್ರವಾದ ಘಟನೆ ನಡೆದಿದೆ. ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಂತೋಷ್ ಲೋಹರ್ ಮಂಗಳವಾರ ರಾತ್ರಿ ತನ್ನ ಬೇಸ್ ಕ್ಯಾಂಪ್ ನಲ್ಲಿ ಮಲಗಿದ್ದಾಗ ವಿಷಕಾರಿ ಹಾವೊಂದು ಕಚ್ಚಿತ್ತು.
ಈ ವೇಳೆ ಆತ ತನಗೆ ಕಚ್ಚಿದ ಹಾವನ್ನು ಹಿಡಿದು 2—3 ಬಾರಿ ಕಚ್ಚಿ ಹಾವನ್ನು ಕೊಂದು ಹಾಕಿದ್ದಾನೆ. ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾನೆ.
ಹಾವು ಕಚ್ಚಿದರೆ ಅದರ ವಿಷ ಹೋಗಲು ನಾವೂ ಹಾವಿಗೆ ಕಚ್ಚಬೇಕು ಎನ್ನುವ ನಂಬಿಕೆ ನಮ್ಮ ಹಳ್ಳಿಯಲ್ಲಿದೆ. ಹಾಗಾಗಿ ನಾನು ಹಾವಿಗೆ ಕಚ್ಚಿರುವುದಾಗಿ ಸಂತೋಷ್ ಹೇಳಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97