ಖಾಸಗಿ ಕ್ಷಣಕ್ಕೆ ಅಡ್ಡಿಪಡಿಸಿತೆಂದು 3 ವರ್ಷದ ಮಗುವನ್ನು ಬಲಿಪಡೆದ ಪಾಪಿ! - Mahanayaka

ಖಾಸಗಿ ಕ್ಷಣಕ್ಕೆ ಅಡ್ಡಿಪಡಿಸಿತೆಂದು 3 ವರ್ಷದ ಮಗುವನ್ನು ಬಲಿಪಡೆದ ಪಾಪಿ!

michael raj
13/07/2024


Provided by

ಬೆಂಗಳೂರು:  ಖಾಸಗಿ ಕ್ಷಣಕ್ಕೆ ಅಡ್ಡಿ ಪಡಿಸಿತೆಂದು 3 ವರ್ಷದ ಮಗುವನ್ನು  ವ್ಯಕ್ತಿಯೋರ್ವ ಥಳಿಸಿ ಕೊಂದು ಹಾಕಿರುವ  ಆಘಾತಕಾರಿ ಘಟನೆ  ಬೆಂಗಳೂರಿನಲ್ಲಿ ನಡೆದಿದ್ದು, ಘಟನೆ್ಎ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಶ್ವಿನ್(3) ಹತ್ಯೆಗೀಡಾಗಿರುವ ಮಗುವಾಗಿದೆ. ವರದಿಗಳ ಪ್ರಕಾರ, ಮೃತ ಅಶ್ವಿನ್‌ ತಾಯಿ ರಮ್ಯಾಳ ಪ್ರಿಯಕರ ಮೈಕೆಲ್ ರಾಜ್(30) ಮಗುವನ್ನು ಬಲಿ ಪಡೆದ ಆರೋಪಿಯಾಗಿದ್ದಾನೆ.

ಅವಿವಾಹಿತನಾಗಿದ್ದ ಮೈಕೆಲ್‌ ರಾಜ್‌ ಬೊಮ್ಮನಹಳ್ಳಿಯ ವಿರಾಟ್ ನಗರದ ನಿವಾಸಿ ಆಗಿದ್ದು, ಗ್ಯಾರೇಜ್ ಅಂಗಡಿಯನ್ನು ಇಟ್ಟುಕೊಂಡಿದ್ದ.  ಇದೇ ಏರಿಯಾ ಸಮೀಪದಲ್ಲಿ ರಮ್ಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ರಮ್ಯಾಗೆ 6 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಹೊಂದಾಣಿಕೆ ಸಮಸ್ಯೆಯಿಂದ ಪತಿ—ಪತ್ನಿ ದೂರವಾಗಿದ್ದರು.  ಬಾಡಿಗೆ ಮನೆಗೆ ಬಂದ ಸಂದರ್ಭದಲ್ಲಿ ಮೈಕೆಲ್ ರಾಜ್ ನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.

ಕಳೆದ ಆರೇಳು ತಿಂಗಳಿಂದ ಇವರ ಪ್ರೇಮ ಸಂಬಂಧ ಮುಂದುವರಿದಿತ್ತು.  ಜುಲೈ 6 ರಂದು ಸಂಜೆ ರಮ್ಯಾ ಲೈಟ್ ಬಲ್ಬ್ ಖರೀದಿಸಲು ಹೊರಗೆ ಹೋಗಿ ಬಂದಾಗ ಅಶ್ವಿನ್ ಮುಖದ ಮೇಲೆ ಗಾಯಗಳು ಕಂಡುಬಂದಿವೆ. ಆರೋಪಿ ಮೈಕೆಲ್‌ ರಾಜ್‌ ಮಗುವಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆ ರಾತ್ರಿ, ಅಶ್ವಿನ್ ಸ್ನಾನಗೃಹವನ್ನು ಬಳಸಲು ಎಚ್ಚರಗೊಂಡು ನೆಲದ ಮೇಲೆ ಉಳಿದಿದ್ದ ಜೋಳವನ್ನು ತಿಂದಿದ್ದಾನೆ. ಇದರಿಂದ ಕೋಪಗೊಂಡ ಮೈಕೆಲ್‌ ರಾಜ್‌ ಮತ್ತೆ ಮಗುವಿಗೆ ಮತ್ತೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವರದಿಯಾಗಿದೆ.

ಸ್ವಲ್ಪ ಸಮಯದ ನಂತರ ಬಾಲಕನಿಗೆ ಅಪಸ್ಮಾರ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ರಮ್ಯಾ ಮತ್ತು ಮೈಕೆಲ್‌ ರಾಜ್‌ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜುಲೈ 7 ರಂದು ನಿಮ್ಹಾನ್ಸ್‌ಗೆ ಶಿಫ್ಟ್ ಮಾಡಿದ್ದಾರೆ. ಆದರೆ ಜುಲೈ 8 ರಂದು ಮಗು ಮೃತಪಟ್ಟಿದ್ದಾನೆ. ಮೈಕೆಲ್‌ ರಾಜ್‌ ಮಗುವಿನ ತಲೆಯನ್ನು ಗೋಡೆಗೆ ಹೊಡೆದಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಪೊಲೀಸರು ಆರೋಪಿ ಮೈಕೆಲ್ ರಾಜ್‌ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ