ಯುಪಿಯಲ್ಲಿನ ಹೊಟೇಲ್ ನಲ್ಲಿ ಮಾಲೀಕರ ಹೆಸ್ರು ಪ್ರದರ್ಶನ ವಿಚಾರ: ಅಬ್ಬಾಸ್‌ ನಖ್ವಿ ಅಸಮಾಧಾನ - Mahanayaka

ಯುಪಿಯಲ್ಲಿನ ಹೊಟೇಲ್ ನಲ್ಲಿ ಮಾಲೀಕರ ಹೆಸ್ರು ಪ್ರದರ್ಶನ ವಿಚಾರ: ಅಬ್ಬಾಸ್‌ ನಖ್ವಿ ಅಸಮಾಧಾನ

19/07/2024


Provided by

ಉತ್ತರ ಪ್ರದೇಶದಲ್ಲಿ ನಡೆಯುವ ಕನ್ವರ್‌ ಯಾತ್ರೆಯ ಮಾರ್ಗದಲ್ಲಿರುವ ಎಲ್ಲಾ ಹೋಟೆಲ್‌ ಮತ್ತು ಆಹಾರ ಮಳಿಗೆಗಳ ಮಾಲೀಕರು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕೆಂದು ಮುಝಫ್ಫರನಗರ ಪೊಲೀಸರು ಸೂಚನೆ ನೀಡಿದ್ದಾರೆ. ಈ ನಡೆಯ ಬಗ್ಗೆ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಇದು ಅಸ್ಪೃಶ್ಯತೆಯ ಕಾಯಿಲೆಯನ್ನು ಹರಡಬಹುದು’ ಎಂದು ಅವರು ಹೇಳಿದ್ದಾರೆ.

ಕೆಲ ಅತಿ ಉತ್ಸಾಹಿ ಅಧಿಕಾರಿಗಳ ಅವಸರದ ಆದೇಶಗಳು ಅಸ್ಪೃಶ್ಯತೆಯ ಕಾಯಿಲೆಯನ್ನು ಹರಡಬಹುದು. ಧರ್ಮವನ್ನು ಗೌರವಿಸಬೇಕು. ಆದರೆ ಅಸ್ಪೃಶ್ಯತೆಯನ್ನು ಪ್ರೋತ್ಸಾಹಿಸಬಾರದು ಎಂದು ಪರೋಕ್ಷವಾಗಿ ಆದೇಶವನ್ನು ಟೀಕಿಸಿದ್ದಾರೆ.

ತಮ್ಮ ಪೋಸ್ಟ್‌ಗೆ ತಮ್ಮನ್ನು ಹಲವರು ಟ್ರೋಲ್‌ ಮಾಡಿರುವುದನ್ನೂ ಗಮನಿಸಿ ಇನ್ನೊಂದು ಟ್ವೀಟ್‌ ಮಾಡಿದ ನಖ್ವಿ, “ನನಗೆ ಕನ್ವರ್‌ ಯಾತ್ರೆ ಕುರಿತು ಗೌರವ ಮತ್ತು ಭಕ್ತಿಯ ಕುರಿತಂತೆ ಪ್ರಮಾಣಪತ್ರ ನೀಡಬೇಡಿ. ಯಾವುದೇ ಧರ್ಮವು ಅಸಹಿಷ್ಣುತೆ ಮತ್ತು ಅಸ್ಪೃಶ್ಯತೆಗೆ ಒತ್ತೆಯಾಳಾಗಬಾರದು ಎಂದು ನಾನು ಸದಾ ನಂಬಿದ್ದೇನೆ’ ಎಂದು ಅವರು ಹೇಳಿದ್ದಾರೆ.

ತಾನು ಹಿಂದೆ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದ ಫೋಟೋವನ್ನೂ ಅವರು ಪೋಸ್ಟ್‌ ಮಾಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ