ಇಸ್ರೇಲಿ ಉತ್ಪನ್ನಗಳನ್ನು ನಿಷೇಧಿಸುತ್ತೇವೆ ಎಂದ ಪಾಕಿಸ್ತಾನ: ನೆತನ್ಯಾಹುಗೆ ಶಾಕ್ - Mahanayaka

ಇಸ್ರೇಲಿ ಉತ್ಪನ್ನಗಳನ್ನು ನಿಷೇಧಿಸುತ್ತೇವೆ ಎಂದ ಪಾಕಿಸ್ತಾನ: ನೆತನ್ಯಾಹುಗೆ ಶಾಕ್

19/07/2024


Provided by

ಫೆಲೆಸ್ತೀನ್ ವಿರುದ್ಧ ನಡೆಯುತ್ತಿರುವ ಇಸ್ರೇಲ್ ಆಕ್ರಮಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವ ಎಲ್ಲಾ ಕಂಪನಿಗಳು ಮತ್ತು ಉತ್ಪನ್ನಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದಾಗಿ ಪಾಕಿಸ್ತಾನ ಸರ್ಕಾರ ಶುಕ್ರವಾರ ಪ್ರಕಟಿಸಿದೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮತ್ತು ಅವಳಿ ನಗರ ರಾವಲ್ಪಿಂಡಿ ನಡುವಿನ ಫೈಜಾಬಾದ್ ಇಂಟರ್ ಚೇಂಜ್ ನಲ್ಲಿ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್ಪಿ) ನಡೆಸಿದ ಪ್ರತಿಭಟನಾ ಧರಣಿಯನ್ನು ಕೊನೆಗೊಳಿಸಲು ಕಾರಣವಾದ ಯಶಸ್ವಿ ಮಾತುಕತೆಗಳನ್ನು ನಡೆಸಿದ ನಂತರ ರಾಜಕೀಯ ವ್ಯವಹಾರಗಳ ಪ್ರಧಾನ ಮಂತ್ರಿಯ ವಿಶೇಷ ಸಹಾಯಕ (ಎಸ್ಎಪಿಎಂ) ರಾಣಾ ಸನಾವುಲ್ಲಾ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಟಿಎಲ್ಪಿ ಪ್ರತಿನಿಧಿಗಳೊಂದಿಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸನಾವುಲ್ಲಾ, ಫೆಲೆಸ್ತೀನ್ ಮತ್ತು ಗಾಝಾವನ್ನು ಬೆಂಬಲಿಸಿ ಟಿಎಲ್ಪಿ ಮಾಡಿದ ಬೇಡಿಕೆಗಳಿಗೆ ಪಾಕಿಸ್ತಾನ ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ