ಫೋನ್ ಪೇ ಬಾಯ್ಕಾಟ್ ಗೆ ರಾಜ್ಯಾದ್ಯಂತ ಕನ್ನಡ ಸಂಘಟನೆಗಳಿಂದ ಕರೆ: ಕಾರಣ ಏನು? - Mahanayaka

ಫೋನ್ ಪೇ ಬಾಯ್ಕಾಟ್ ಗೆ ರಾಜ್ಯಾದ್ಯಂತ ಕನ್ನಡ ಸಂಘಟನೆಗಳಿಂದ ಕರೆ: ಕಾರಣ ಏನು?

phonepe
20/07/2024


Provided by

ಕರ್ನಾಟಕದಲ್ಲಿ ಉದ್ಯೋಗ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಈಗಾಗಲೇ ಉದ್ಯೋಗ ಮೀಸಲಾತಿ ತರಲು ಮುಂದಾಗಿದ್ದು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಭದ್ರತೆ ತರಲು ಮುಂದಾಗಿತ್ತು. ಆದರೆ ಈ ನಡೆಯನ್ನು ವಿರೋಧಿಸಿ ಕನ್ನಡಿಗರ ಸ್ವಾಭಿಮಾನವನ್ನೇ ಟೀಕಿಸಿದ ಪೋನ್‌ ಪೇ(Phone Pay) ಸಂಸ್ಥೆಯ ಸಿಇಒ ಸಮೀರ್ ನಿಗಮ್ (CEO Sameer Nigam) ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರವನ್ನು ಟೀಕಿಸಿದ್ದ  ಸಮೀರ್​ ನಿಗಮ್, ನನಗೆ 46 ವರ್ಷ. 15ಕ್ಕಿಂತ ಹೆಚ್ಚು ವರ್ಷಗಳ ಕಾಲ ರಾಜ್ಯದಲ್ಲಿ ಎಂದಿಗೂ ವಾಸ ಮಾಡಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ದೇಶದಾದ್ಯಂತ ಅವರು ಪೋಸ್ಟಿಂಗ್ ಪಡೆದಿದ್ದರು. ಹಾಗಿದ್ರೆ ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ನಿರ್ಮಿಸಿ, ಭಾರತದಾದ್ಯಂತ 25000+ ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ! ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಶೇಮ್​ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್‌ ನಲ್ಲಿ ಕರ್ನಾಟಕ ಎಂದರೆ ಕನ್ನಡ ಮಾತನಾಡುವ ಜನರು ಮಾತ್ರ ಮೀಸಲಾತಿ ಪಡೆಯುವುದೇ? ನಾನು ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ಯಾವುದೇ ಭಾಷೆಯನ್ನು ನಾನು ಕಲಿಯಬಲ್ಲೆ. ಭಾರತದ ಸಂವಿಧಾನ ನನಗೆ ಈ ಹಕ್ಕುಗಳನ್ನು ನೀಡಿದೆ. ಇದು ನನ್ನ ಆಯ್ಕೆ. ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಇಂತಿಷ್ಟು ಉದ್ಯೋಗ ಕನ್ನಡಿಗರಿಗೆ ಮೀಸಲಾಗಿರಬೇಕು ಎನ್ನುವುದು ಕನ್ನಡಿಗರ ಅಪೇಕ್ಷೆಯಾಗಿದ್ದರೆ, ಈ ಚಿಂತನೆಯನ್ನು ಅರ್ಥವೇ ಮಾಡಿಕೊಳ್ಳದೇ ಕನ್ನಡಿಗರಿಗೆ ನಿಯಮಗಳನ್ನು ಕಲಿಸಲು ಬರುವ ಧಾಟಿಯಲ್ಲಿ ಸಮೀರ್​ ನಿಗಮ್ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಪೋನ್ ಪೇ ಸಿಇಓ ಹೇಳಿಕೆ ವಿರುದ್ಧ ಕನ್ನಡಪರ ಹೋರಾಟಗಾರರು ತಿರುಗಿ ಬಿದ್ದಿದ್ದು, ಫೋನ್ ಪೇ Uninstall ಮಾಡಲು ಕರೆ ನೀಡಿದ್ದಾರೆ.  Phonepe Boycott ಅಭಿಯಾನ ಆರಂಭವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ