ಹೊಸ ಕ್ರಿಮಿನಲ್ ಲಾ: ಕೇಂದ್ರ ಸರ್ಕಾರ ಸಲಹೆ ಪಡೆಯಬೇಕಿತ್ತು ಎಂದ ಮದ್ರಾಸ್ ಹೈಕೋರ್ಟ್ - Mahanayaka

ಹೊಸ ಕ್ರಿಮಿನಲ್ ಲಾ: ಕೇಂದ್ರ ಸರ್ಕಾರ ಸಲಹೆ ಪಡೆಯಬೇಕಿತ್ತು ಎಂದ ಮದ್ರಾಸ್ ಹೈಕೋರ್ಟ್

20/07/2024


Provided by

ಐಪಿಸಿ, ಸಿಪಿಸಿ ಮತ್ತು ಪುರಾವೆ ಕಾಯಿದೆಯ ಬದಲಿಗೆ ಹೊಸ ಕ್ರಿಮಿನಲ್‌ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಕೇಂದ್ರ ಸರ್ಕಾರ ಕನಿಷ್ಠ ಕಾನೂನು ಆಯೋಗದ ಸಲಹೆಯನ್ನಾದರೂ ಪಡೆದುಕೊಳ್ಳಬೇಕಿತ್ತು. ಕಾನೂನು ಆಯೋಗ ಈ ಉದ್ದೇಶಕ್ಕಾಗಿಯೇ ಇದೆ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

ಈ ಹೊಸ ಕಾನೂನುಗಳನ್ನು “ಅಸಂವಿಧಾನಿಕ” ಎಂದು ಘೋಷಿಸಬೇಕೆಂದು ಕೋರಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ ಎಸ್‌ ಭಾರತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.
ಮೂಲ ಮೂರು ಕಾನೂನುಗಳನ್ನು ಕೇಂದ್ರ ಏಕೆ ಬದಲಿಸಲು ಬಯಸಿತ್ತು, ಹಿಂದಿನ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಬಹುದಾಗಿತ್ತು, ಕೇಂದ್ರದ ಕ್ರಮದ ಹಿಂದಿನ ಉದ್ದೇಶ ಒಳ್ಳೆಯದಾಗಿರಬಹುದು. ಆದರೆ ಅದರಿಂದ ಉಂಟಾಗಬಹುದಾದ ವಿಳಂಬದ ಕುರಿತು ನಮಗೆ ಕಳವಳವಿದೆ,” ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಸುಂದರ್‌ ಮತ್ತು ಎನ್‌ ಸೆಂಥಿಲ್‌ ಕುಮಾರ್‌ ರ ನ್ಯಾಯಪೀಠ ಹೇಳಿತು.

ಸಂಸತ್ತು ಯಾವುದೇ ಅರ್ಥಪೂರ್ಣ ಚರ್ಚೆಗಳಿಲ್ಲದೆ ಈ ಮೂರು ಹೊಸ ಕಾನೂನುಗಳಿಗೆ ಅಂಗೀಕಾರ ನೀಡಿದೆ ಎಂದು ಭಾರತಿ ಪರ ಹಾಜರಿದ್ದ ಹಿರಿಯ ವಕೀಲ ಎನ್‌ ಆರ್‌ ಎಲಂಗೊ ಹೇಳಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ