ರಮೇಶ್ ಜಾರಕಿಹೊಳಿ ವಿಡಿಯೋ ನೋಡಿದರೆ ಅದು ರೇಪ್ ಅಂತ ಅನ್ನಿಸುತ್ತಿಲ್ಲ | ರೇಣುಕಾಚಾರ್ಯ - Mahanayaka

ರಮೇಶ್ ಜಾರಕಿಹೊಳಿ ವಿಡಿಯೋ ನೋಡಿದರೆ ಅದು ರೇಪ್ ಅಂತ ಅನ್ನಿಸುತ್ತಿಲ್ಲ | ರೇಣುಕಾಚಾರ್ಯ

05/03/2021


Provided by

ಬೆಂಗಳೂರು:  ರಮೇಶ್ ಜಾರಕಿಹೊಳಿ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ರೇಣುಕಾಚಾರ್ಯ,  ವಿಡಿಯೋದಲ್ಲಿ ಸಂಭಾಷಣೆ ಗಮನಿಸಿದರೆ, ಅದು ರೇಪ್ ಅಥವಾ ಕಿರುಕುಳ ಅಲ್ಲ ಅದು ಇಬ್ಬರ ಖಾಸಗಿ ಬದುಕು ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ರಾಜಕಾರಣಿಗಳ ವೀಕ್ ನೆಸ್ ಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳಿಗೆ ಕೊನೆ ಹಾಡಬೇಕಾದರೆ, ದೂರು ನೀಡಿದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಇನ್ನೂ ಈ ಮಹಿಳೆ ಇಡೀ ಸ್ತ್ರೀ ಕುಲಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು,  ದೂರು ನೀಡಿದ ವ್ಯಕ್ತಿಗೆ ಹಾಗೂ ಆ ಮಹಿಳೆಯ ನಡುವಿನ ಸಂಬಂಧ ಏನು ಎಂದು ಪ್ರಶ್ನಿಸಿದರು. ಜೊತೆಗೆ ಸಿಡಿ ಮಾಡಲು ಪ್ರಚೋದನೆ ನೀಡಿದವರು ಯಾರು ಎನ್ನುವುದನ್ನು ದಿನೇಶ್ ಕಲ್ಲಹಳ್ಳಿಯನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಒಳಗೆ ಹಾಕಿ ರುಬ್ಬಿದರೆ ಸತ್ಯ ಹೊರ ಬರುತ್ತದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ