ರಮೇಶ್ ಜಾರಕಿಹೊಳಿ ಸಿಡಿಯ ಹಿಂದೆ ದೊಡ್ಡ ವ್ಯಕ್ತಿಗಳಿದ್ದಾರೆ | ಟ್ವಿಸ್ಟ್ ನೀಡಿದ ಕುಮಾರಸ್ವಾಮಿ - Mahanayaka
11:07 AM Saturday 15 - August 2026

ರಮೇಶ್ ಜಾರಕಿಹೊಳಿ ಸಿಡಿಯ ಹಿಂದೆ ದೊಡ್ಡ ವ್ಯಕ್ತಿಗಳಿದ್ದಾರೆ | ಟ್ವಿಸ್ಟ್ ನೀಡಿದ ಕುಮಾರಸ್ವಾಮಿ

05/03/2021

ಮೈಸೂರು: ರಮೇಶ್ ಜಾರಕಿಹೊಳಿ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಟ್ವಿಸ್ಟ್ ನೀಡಿದ್ದು,  ರಮೇಶ್ ಜಾರಕಿಹೊಳಿ ಸಿಡಿಗೆ ಸಂಬಂಧಿಸಿದಂತೆ  ಕಳೆದ 3 ತಿಂಗಳಿನಿಂದ ಡೀಲ್ ನಡೆದಿದೆ. 5 ಕೋಟಿ ರೂಪಾಯಿ ಡೀಲ್ ನಡೆದಿದ್ದು, ಈ ಕೇಸ್ ನಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು,  ರಮೇಶ್ ಜಾರಕಿಹೊಳಿಯನ್ನು ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಈ ಸಿಡಿಯ ಮುಖ್ಯ ಉದ್ದೇಶವಾಗಿತ್ತು.  ಇದರಲ್ಲಿ ಅವರು ಸಫಲರಾಗಿದ್ದಾರೆ.  ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವತಿ ಹಾಗೂ ಈಗ ಮಂತ್ರಿಯಾಗಿರುವ ವ್ಯಕ್ತಿಗಳಿಬ್ಬರು ಸೇರಿಕೊಂಡು ಈ ವಿಡಿಯೋವನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಿಡಿ ಇದೆ ಎಂದು ವ್ಯಕ್ತಿಯೊಬ್ಬ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ ಅವನನ್ನು ಮೊದಲು ಅರೆಸ್ಟ್ ಮಾಡಬೇಕು. ಆತ 4 ಸಿಡಿ ಇದೆ ಎಂದು ಹೇಳಿದ್ದಾನೆ. ಹಣಕ್ಕಾಗಿ ಇಂತಹ ಬ್ಲ್ಯಾಕ್ ಮೇಲ್ ಮಾಡುವವರು ಹೆಚ್ಚಾಗಿದ್ದಾರೆ. ಖಾಸಗಿ ಜೀವನವನ್ನು ಸಾರ್ವಜನಿಕವಾಗಿ ತರುವುದನ್ನು ಮಾಧ್ಯಮಗಳಲ್ಲಿ ನಾನು ನೋಡಿದ್ದೇನೆ. ಮೊದಲು ಅಂತವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

whatsapp

ಇತ್ತೀಚಿನ ಸುದ್ದಿ