ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಏರಿದ್ದ ಬಾಲಕನ ದಾರುಣ ಸಾವು! - Mahanayaka
12:22 PM Saturday 23 - August 2025

ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಏರಿದ್ದ ಬಾಲಕನ ದಾರುಣ ಸಾವು!

ramachandra
24/07/2024


Provided by

ಚಿತ್ರದುರ್ಗ: ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಏರಿದ್ದ ಬಾಲಕನೊಬ್ಬ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹನುಮಾಪುರ ಗ್ರಾಮದಲ್ಲಿ ನಡೆದಿದೆ.

6ನೇ ತರಗತಿಯ ವಿದ್ಯಾರ್ಥಿ ರಾಮಚಂದ್ರ (12) ಮೃತಪಟ್ಟ ಬಾಲಕನಾಗಿದ್ದಾನೆ. ವಿದ್ಯುತ್ ಕಂಬದ ಮೇಲಿನ ತಂತಿಗೆ ಪಾರಿವಾಳವೊಂದು ಸಿಲುಕಿ ಒದ್ದಾಡುತ್ತಿತ್ತು. ಇದನ್ನು ನೋಡಿ ಮನಕರಗಿ   ಬಾಲಕ ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಏರಿದ್ದ. ಈ ವೇಳೆ ವಿದ್ಯುತ್ ಶಾಕ್ ತಗುಲಿ ಬಾಲಕ ಸಾವನ್ನಪ್ಪಿದ್ದಾನೆ.

ವಿದ್ಯುತ್ ಶಾಕ್ ತಗುಲಿದ ಪರಿಣಾಮ ಬಾಲಕನ ಮೃತದೇಹ ತಂತಿಗೆ ಸಿಲುಕಿಕೊಂಡಿರುವ ದೃಶ್ಯ ಮನಕರಗುವಂತಾಗಿತ್ತು. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಾನವೀಯತೆಯಿಂದ ಪಾರಿವಾಳವನ್ನು ರಕ್ಷಿಸಲು ಹೋದ ಬಾಲಕ ತಾನೇ ಬಲಿಯಾಗಿರುವುದು ದುರಾದೃಷ್ಟಕರ. ಸದ್ಯ ಘಟನಾ ಸ್ಥಳಕ್ಕೆ ರಾಂಪುರ ಪಿಎಎಸ್‌ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ