ಅಯ್ಯೋ ಸಾವೇ: ಒದ್ದೆ ಕೈಯಲ್ಲಿ ಮೊಬೈಲ್ ತೆಗೆಯುವಾಗ ವಿದ್ಯುತ್ ಆಘಾತ; ಬಾಲಕಿ ದುರ್ಮರಣ - Mahanayaka

ಅಯ್ಯೋ ಸಾವೇ: ಒದ್ದೆ ಕೈಯಲ್ಲಿ ಮೊಬೈಲ್ ತೆಗೆಯುವಾಗ ವಿದ್ಯುತ್ ಆಘಾತ; ಬಾಲಕಿ ದುರ್ಮರಣ

27/07/2024


Provided by

ಕೈ ಒದ್ದೆಯಾಗಿದ್ದರೆ ಮೊಬೈಲ್‌ ಚಾರ್ಜ್‌ ಗೆ ಇಡಲು ಹೋಗಬೇಡಿ. ಯಾಕಂದ್ರೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾವನ್ನಪ್ಪಿದ್ದಾಳೆ. ಒದ್ದೆ ಕೈಯಲ್ಲಿ ಹೋಗಿ ವಿದ್ಯುತ್ ಸ್ಪರ್ಶಿಸಿರುವುದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

ಖಮ್ಮಂ ಜಿಲ್ಲೆಯ ಚಿಂತಕಣಿ ಮಂಡಲದ ಮಟ್ಕೆಪಲ್ಲಿ ನಾಮವರಂ ಗ್ರಾಮದ ಕಟಿಕಳ ರಾಮಕೃಷ್ಣ ದಂಪತಿಗೆ ಮಗಳು ಅಂಜಲಿ ಕಾರ್ತಿಕಾ (9) ಮೃತ ಬಾಲಕಿ.
ಶುಕ್ರವಾರ ಬೆಳಿಗ್ಗೆ ಅಂಜಲಿ ತನ್ನ ತಂದೆಯಿಂದ ಸೆಲ್ ಫೋನ್ ತೆಗೆದುಕೊಂಡು ಸ್ವಲ್ಪ ಸಮಯದವರೆಗೆ ಅದರಲ್ಲಿ ವೀಡಿಯೊಗಳನ್ನು ವೀಕ್ಷಿಸಿದ್ದಾಳೆ. ಈ ವೇಳೆ ಮೊಬೈಲ್ ಚಾರ್ಜ್ ಮುಗಿದ ಕಾರಣಮೊಬೈಲ್ ಚಾರ್ಜ್ ಮಾಡಲು ಹೋಗಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ್ದು, ಬಾಲಕಿ ಕುಸಿದು ಬಿದ್ದಿದ್ದಾಳೆ.

ಒದ್ದಾಡುತ್ತಿರುವ ಬಾಲಕಿಯನ್ನು ಗಮನಿಸಿದ ಪೋಷಕರು ತಕ್ಷಣ ಗ್ರಾಮದ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಬಾಲಕಿ ಆಟವಾಡುತ್ತಿದ್ದಂತೆ ಒದ್ದೆ ಕೈಯಲ್ಲಿ ಹೋಗಿ ವಿದ್ಯುತ್ ಸ್ಪರ್ಶಿಸಿರುವುದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ