ದರ್ಶನ್ ಭೇಟಿಯ ಬಗ್ಗೆ ಹೇಳಿಕೆ: ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗಿದ್ದ ಸಿದ್ಧಾರೂಢಗೆ ನೋಟಿಸ್! - Mahanayaka

ದರ್ಶನ್ ಭೇಟಿಯ ಬಗ್ಗೆ ಹೇಳಿಕೆ: ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗಿದ್ದ ಸಿದ್ಧಾರೂಢಗೆ ನೋಟಿಸ್!

siddarudha
28/07/2024

ಪ್ರಕರಣವೊಂದರಲ್ಲಿ 22 ವರ್ಷಗಳಿಂದ ಜೈಲಿನಲ್ಲಿದ್ದ ತುರುವನೂರು ಸಿದ್ಧಾರೂಢ ಇತ್ತೀಚೆಗೆ ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ, ಜೈಲಿನಿಂದ ಹೊರ ಬಂದ ತಕ್ಷಣವೇ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಜೈಲಿನಲ್ಲಿ ಬಿಡುಗಡೆಗೂ ಮೊದಲು ಅಧಿಕಾರಿಗಳ ಅನುಮತಿ ಪಡೆದು ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ದರ್ಶನ್ ಜೊತೆಗೆ ವಿಐಪಿ ಸೆಲ್ ನಲ್ಲಿ ಕಳೆದಿದ್ದೆ, ದರ್ಶನ್ ಅವರಿಗೆ ಧ್ಯಾನ ಹೇಳಿಕೊಟ್ಟೆ ಎಂದೆಲ್ಲ ಯೂಟ್ಯೂಬ್ ಚಾನೆಲ್ ಗಳ ಮುಂದೆ ಹೇಳಿಕೊಂಡಿದ್ದ ಸಿದ್ಧಾರೂಢ ಅವರಿಗೆ ಇದೀಗ ಅವರ ಮಾತುಗಳೇ ಮುಳುವಾಗುವಂತೆ ಕಾಣುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಸಿದ್ಧಾರೂಢನ ಮಾತುಗಳನ್ನು ಅಲ್ಲಗೆಳೆದಿದ್ದು, ಅಂಥ ಸನ್ನಿವೇಷವೇ ಘಟಿಸಿಲ್ಲ. ದರ್ಶನ್‌ ರನ್ನು ಭೇಟಿಯೇ ಮಾಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಗೆ ತಕ್ಷಣ ಉತ್ತರ ನೀಡುವಂತೆ  ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.

ಸೋಷಿಯಲ್‌ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಸಿದ್ಧಾರೂಢ ಹೇಳಿದ ಮಾತುಗಳೆಲ್ಲವೂ ಪೊಲೀಸ್‌ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಈ ಬಗ್ಗೆ ಮಾಹಿತಿ ನೀಡುವಂತೆ ಪರಪ್ಪನ ಅಗ್ರಹಾರ ಜೈಲಿನ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದರ್ಶನ್‌ ಅವರಿರುವ VIP ಸೆಲ್‌ನೊಳಗೆ ಬೇರೆಯವರಿಗೆ ಪ್ರವೇಶ ನೀಡಲಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಜೈಲು ಸಿಬ್ಬಂದಿ, ಅಂಥ ಯಾವುದೇ ಘಟನೆ ನಡೆದಿಲ್ಲ. ಬೇರೆ ಕೈದಿಗಳಿಗೆ ದರ್ಶನ್‌ ಅವರಿರುವ VIP ಸೆಲ್‌ ಗೆ ಪ್ರವೇಶ ನೀಡಿಲ್ಲ ಎಂದು ಉತ್ತರ ನೀಡಿದೆ. ಜತೆಗೆ ಸಿದ್ಧಾರೂಢನಿಗೆ ನೋಟೀಸ್‌ ನೀಡಿ ವಿಚಾರಣೆಗೂ ಹಾಜರಾಗುವಂತೆ ಕಟ್ಟಪ್ಪಣೆ ಹೊರಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ