ವಯನಾಡ್: ದುರಂತದ ವೇಳೆ ಪರಸ್ಪರ ಅಪ್ಪಿಕೊಂಡು ಪ್ರಾಣ ಬಿಟ್ಟ ಮನೆಯ ಸದಸ್ಯರು! - Mahanayaka

ವಯನಾಡ್: ದುರಂತದ ವೇಳೆ ಪರಸ್ಪರ ಅಪ್ಪಿಕೊಂಡು ಪ್ರಾಣ ಬಿಟ್ಟ ಮನೆಯ ಸದಸ್ಯರು!

wayanad 5
01/08/2024


Provided by

ಕೇರಳ: ವಯನಾಡ್ ನಲ್ಲಿ ಪರ್ವತ ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ನರಕ ಸ್ವರೂಪ ಪಡೆದುಕೊಂಡಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ವೇಳೆ ಮಣ್ಣಿನಡಿಯಲ್ಲಿ, ನದಿಗಳಲ್ಲಿ, ಕುಸಿದ ಅವಶೇಷಗಳಡಿಲ್ಲಿ ಮೃತದೇಹಗಳು ಸಿಗುತ್ತಿದ್ದು, ಈ ದೃಶ್ಯಗಳು ಕರುಳು ಹಿಂಡುವ ಸ್ಥಿತಿಯಲ್ಲಿವೆ.

ಮುಂಡಕ್ಕೈ ಪ್ರದೇಶದಲ್ಲಿ ಅತೀಹೆಚ್ಚು ಸಾವುಗಳು ಸಂಭವಿಸಿವೆ. ಇಲ್ಲಿನ ಮನೆಯೊಂದರಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಮೂರು ಮೃತದೇಹಗಳು ಪತ್ತೆಯಾಗಿವೆ. ಕುರ್ಚಿ ಮೇಲೆ ಕುಳಿತು ಅಪ್ಪಿಕೊಂಡ ಸ್ಥಿತಿಯಲ್ಲಿ ಈ ಮೂರು ಮೃತದೇಹಗಳು ಪತ್ತೆಯಾಗಿವೆ.

ಇನ್ನೊಂದೆಡೆ ಚೂರಲ್ಮಲಾದಲ್ಲಿ ಕುಸಿದು ಬಿದ್ದಿದ್ದ ಮನೆಯ ಅವಶೇಷದಡಿ ಪುಟ್ಟ ಕಂದಮ್ಮನ ಮೃತದೇಹ ಪತ್ತೆಯಾಗಿದ್ದು, ಕರುಣಾಜನಕವಾಗಿದೆ.

ಇನ್ನೊಂದು ಮನೆಯಲ್ಲಿ ಮಕ್ಕಳು ಸೇರಿದಂತೆ ಐದಾರು ಜನರು ಒಟ್ಟಿಗೆ ಅಪ್ಪಿಕೊಂಡು ಪ್ರಾಣ ಬಿಟ್ಟಿದ್ದಾರೆ. ಈ ದೃಶ್ಯ ಕಂಡು ಕಾರ್ಯಾಚರಣೆಗೆ ತೆರಳಿದ್ದವರು ಕಣ್ಣೀರು ಹಾಕಿದ್ದಾರೆ. ಇಂತಹ ದುಸ್ಥಿತಿಯನ್ನು ಕೇರಳ ಎಂದಿಗೂ ಕಂಡಿರಲಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.

ಈ ಪ್ರದೇಶದಲ್ಲಿ ಇನ್ನೂ ಜನರು ಜೀವಂತವಾಗಿದ್ದಾರೆ ಎಂದು ನಂಬಲಾಗಿದೆ. ಅವರನ್ನು ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೇನೆ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ