‘ಬೇರು-ಚಿಗುರು’ ಕಾರ್ಯಕ್ರಮ: ಆತ್ಮ ವಿಶ್ವಾಸ ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ: ಅಂಬಿಕಾದೇವಿ ಕೋತಮಿರ್

ಔರಾದ್: ಸಾಧಿಸುವ ಛಲ, ಗುರುಭಕ್ತಿ, ಆತ್ಮ ವಿಶ್ವಾಸ, ಸತತ ಪರಿಶ್ರಮ ಇದ್ದಲ್ಲಿ ಅಸಾಧ್ಯವಾದದ್ದು ಸಹ ಸಾಧಿಸಬಹುದಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅಂಬಿಕಾದೇವಿ ಕೋತಮಿರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಳೆಯ ವಿದ್ಯಾರ್ಥಿಗಳ ಸಂಘದ ಸಹಭಾಗಿತ್ವದಲ್ಲಿ ನಡೆದ ಬೇರು-ಚಿಗುರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಂದು ಕುಟುಂಬ ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಹಿರಿಯರ ಮಾರ್ಗದರ್ಶನ ತುಂಬಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂದಿನ ಕಾಲೇಜಿನ ವಿದ್ಯಾರ್ಥಿಗಳು ಹಳೆಯ ವಿಧ್ಯಾರ್ಥಿಗಳ ಅನುಭವದ ಮಾರ್ಗದರ್ಶನದಲ್ಲಿ ನಡೆಯಬೇಕು ಕಾಲೇಜಿನ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಅನುಕರಣೀಯ ಎಂದು ಹೇಳಿದರು.
ಉಪನ್ಯಾಸಕಿ ಡಾ. ಜೈಶಿಲಾ.ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ಮತ್ತು ತಾಂತ್ರಿಕ ಇಲಾಖೆಯು ಹಳೆಯ ವಿದ್ಯಾರ್ಥಿಗಳ ಸಾಧನೆ ಏಳು ಬಿಳುಗಳ ಸಂಗಮದ ವಿಮರ್ಶೆಯ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ನಮ್ಮ ಸಂಸ್ಕೃತಿ ಮರೆತು ಅಧೋಗತಿಗೆ ಹೋಗುತ್ತಿದ್ದೇವೆ ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಂಬಾದಾಸ್ ನೆಳಗೆ ಮಾತನಾಡಿ, ಕಾಲೇಜಿಗೆ ನ್ಯಾಕ್ ವತಿಯಿಂದ ಬಿ ಗ್ರೇಡ್ ಸಿಕ್ಕಿದ್ದು ಸಂತೋಷದ ವಿಷಯ ಕಾಲೇಜಿನ ಅಭಿವೃದ್ಧಿಗೆ ಹಗಲಿರುಳು ದುಡಿಯುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಡಾ. ಅಶೋಕ ಕೋರೆ, ವೀನಾಯಕಭ ಕೋತಮಿರ್, ಊರ್ವಶಿ ಕೂಡ್ಲೆ, ದಯಾನಂದ ಬಾವಗೆ, ಡಸುಬ್ಬಣ್ಣ ಮೂಲಗೆ, ಸಂದೀಪ ಪಾಟೀಲ, ರವಿ ಡೋಳೆ, ರಿಯಾಜಪಾಶಾ ಕೊಳ್ಳೂರ, ತುಳಸಿರಾಮ್ ಮಾನೆ, ವಿಜಯ್ ಠಾಕೂರ್, ವಿದ್ಯಾಸಾಗರ ಉಪ್ಪೆ, ಸಂತೋಷ ಸೇರಿದಂತೆ ಇತರರು ಇದ್ದರು.
ವರದಿ: ರವಿಕುಮಾರ ಶಿಂದೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth