ವಿವಾದಾತ್ಮಕ ವಕ್ಫ್‌ ಮಸೂದೆ ತಿದ್ದುಪಡಿ: ಹೋರಾಟಕ್ಕಿಳಿದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ - Mahanayaka
12:17 AM Thursday 21 - August 2025

ವಿವಾದಾತ್ಮಕ ವಕ್ಫ್‌ ಮಸೂದೆ ತಿದ್ದುಪಡಿ: ಹೋರಾಟಕ್ಕಿಳಿದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

10/08/2024


Provided by

ವಕ್ಫ್ ಮಸೂದೆ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸಲಿರುವ ಜಂಟಿ ಪಾರ್ಲಿಮೆಂಟರಿ ಸಮಿತಿಯನ್ನು ಭೇಟಿಯಾಗುವುದಾಗಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತಿಳಿಸಿದೆ. ಬೋರ್ಡ್ ನ ಅಧ್ಯಕ್ಷ ಮೌಲಾನ ಖಾಲಿದ್ ಸೈಫುಲ್ಲಾ ರಹಮಾನಿ ಅವರ ನೇತೃತ್ವದಲ್ಲಿ ಸದಸ್ಯರು ಆನ್ಲೈನ್ ಸಭೆ ನಡೆಸಿದ್ದು ಜಂಟಿ ಸಮಿತಿಯ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮತ್ತು ಅವರನ್ನು ಭೇಟಿಯಾಗಿ ಮಾಹಿತಿಗಳನ್ನು ಹಂಚಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಬೋರ್ಡ್ ನ ಜನರಲ್ ಸೆಕ್ರೆಟರಿ ಮೌಲಾನ ಮುಹಮ್ಮದ್ ಫಝುಲುರ್ರಹೀಮ್ ಮುಜದ್ದಿದಿ ತಿಳಿಸಿದ್ದಾರೆ.

ಲಾ ಬೋರ್ಡ್ ಈಗಂದೀಗಲೇ ಜಂಟಿ ಸಮಿತಿಯ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಲಿದೆ ಮತ್ತು ತಿದ್ದುಪಡಿ ಮಸೂದೆಯಿಂದ ಮುಸ್ಲಿಂ ಸಮುದಾಯಕ್ಕೆ ಆಗುವ ಆಘಾತ ಮತ್ತು ಆಸ್ತಿಗೆ ಸಂಬಂಧಿಸಿದ ತೊಂದರೆಗಳನ್ನು ವಿವರಿಸಲಿದೆ ಎಂದವರು ಹೇಳಿದ್ದಾರೆ.

ಹಾಗೆಯೇ ಸೆಂಟ್ರಲ್ ವಖ್ಫ್ ಕೌನ್ಸಿಲ್ ಮತ್ತು ವಕ್ಫ್ ಬೋರ್ಡ್‌ಗಳಲ್ಲಿ ತರಬಯಸುವ ಬದಲಾವಣೆಯ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಎರಡೂ ಮಂಡಳಿಯನ್ನು ದುರ್ಬಳಗೊಳಿಸಲಿದೆ ಎಂದವರು ಹೇಳಿದ್ದಾರೆ. ಹಾಗೆಯೇ ವಕ್ಫ್ ಆಸ್ತಿಗಳ ಸಂರಕ್ಷಣೆಯಲ್ಲಿ ದೇಶಾದ್ಯಂತ ಮುಸ್ಲಿಮರು ತೊಡಗಿಸಿಕೊಳ್ಳಬೇಕು ಎಂದವರು ಕರೆ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ