ಈದ್ಗಾ ಮಸೀದಿ ಸರ್ವೇ ವಿವಾದ: ಸುಪ್ರೀಂಕೋರ್ಟ್ ನಿಂದ ತಡೆಯಾಜ್ಞೆ ವಿಸ್ತರಣೆ - Mahanayaka
8:22 AM Thursday 7 - November 2024

ಈದ್ಗಾ ಮಸೀದಿ ಸರ್ವೇ ವಿವಾದ: ಸುಪ್ರೀಂಕೋರ್ಟ್ ನಿಂದ ತಡೆಯಾಜ್ಞೆ ವಿಸ್ತರಣೆ

10/08/2024

ನ್ಯಾಯಾಲಯಕ್ಕೆ ಮೇಲ್ನೋಟದಲ್ಲಿ ಶಾಹಿ ಈದ್ಗಾ ಮಸೀದಿಯ ಸರ್ವೆ ನಡೆಸುವುದಕ್ಕೆ ಅಲಹಾಬಾದ್ ಹೈಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು. ಇದಕ್ಕೆ ಸುಪ್ರೀಂಕೋರ್ಟ್ ಆ ಬಳಿಕ ತಡೆಯಾಜ್ಞೆ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ತನ್ನ ತಡೆಯಾಜ್ಞೆಯನ್ನು ವಿಸ್ತರಿಸಿದೆ.

ನವೆಂಬರ್ ತಿಂಗಳವರೆಗೆ ಈ ತಡೆಯಾಜ್ಞೆ ಇರಲಿದೆ ಎಂದು ವರದಿಯಾಗಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ಸಂಜಯ್ ಕುಮಾರ್ ಅವರು ಈ ತಡೆಯಾಜ್ಞೆ ನೀಡಿದ್ದಾರೆ. ಮಂದಿರವನ್ನು ಒಡೆದು ಶಾಹಿ ಮಸೀದಿಯನ್ನು ಕಟ್ಟಲಾಗಿದೆ ಮತ್ತು ಈ ಭೂಮಿಯು ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟಿಗೆ ಸೇರಿದ್ದಾಗಿದೆ ಎಂದು ದೂರುದಾರರು ನ್ಯಾಯಾಲಯದಲ್ಲಿ ವಾದಿಸಿದ್ದರು.

ಇದೇ ವೇಳೆ 1991ರ ವಿಶೇಷ ಕಾಯ್ದೆಯನ್ನು ಈ ದೂರುದಾರರ ವಾದವು ಉಲ್ಲಂಘಿಸುತ್ತದೆ ಎಂದು ಮಸೀದಿ ವಾದಿಸಿತ್ತು ಮತ್ತು ಹೈಕೋರ್ಟ್ ಇವರ ವಾದವನ್ನು ತಳ್ಳಿ ಹಾಕಿತ್ತು. ಹಾಗೆಯೇ ಸರ್ವೆಗೆ ಅನುಮತಿ ನೀಡಿತ್ತು. ಆ ಬಳಿಕ ಮಸೀದಿಯ ಹೊಣೆಗಾರರು ಸುಪ್ರೀಂ ಕೋರ್ಟ್ ನ ಬಾಗಿಲು ತಟ್ಟಿದ್ದರು. ಸುಪ್ರೀಂ ಕೋರ್ಟ್ ಈ ಸರ್ವೆಗೆ ತಡೆ ವಿಧಿಸಿತ್ತು. ಇದೀಗ ಈ ತಡೆಯನ್ನು ನವೆಂಬರ್ ವರೆಗೆ ವಿಸ್ತರಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ