ಅಧಿಕಾರಿಗಳ ಬೇಜವಾಬ್ದಾರಿ: ಫಲಾನುಭವಿಗಳ ಬದಲು, ಬೇರೆಯವರ ಖಾತೆಗೆ ಪರಿಹಾರದ ಹಣ ಜಮಾ - Mahanayaka
1:54 PM Wednesday 27 - August 2025

ಅಧಿಕಾರಿಗಳ ಬೇಜವಾಬ್ದಾರಿ: ಫಲಾನುಭವಿಗಳ ಬದಲು, ಬೇರೆಯವರ ಖಾತೆಗೆ ಪರಿಹಾರದ ಹಣ ಜಮಾ

chikkamagaluru
11/08/2024


Provided by

ಕೊಟ್ಟಿಗೆಹಾರ: ಮಳೆಯಿಂದ ಹಾನಿಗೊಳಗಾಗಿದ್ದ ಮನೆ ಪರಿಹಾರ ಫಲಾನುಭವಿ ಖಾತೆಗೆ ಹಾಕುವ ಬದಲು ಮತ್ತೊಬ್ಬರ ಖಾತೆಗೆ ಜಮಾ ಆಗಿರುವುದು ಮೂಡಿಗೆರೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿನ್ನಡಿ ಗ್ರಾಮದ ದಿನೇಶ್ ಎಂಬುವರ ಮನೆ ಈ ಬಾರಿ ಸುರಿದ ಮಳೆಗೆ ಕುಸಿದು ಬಿದ್ದಿತ್ತು ಕುಟುಂಬಸ್ಥರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ದಿನೇಶ್ ಅವರ ಪತ್ನಿ `ಭಾರತಿ ಅವರ ಖಾತೆಗೆ ಜಮೆ ಆಗಬೇಕಿದ್ದ ಪರಿಹಾರದ ಮೊತ್ತ ಅತ್ತಿಗೆರೆ ಗ್ರಾಮದ ಸಾವಿತ್ರಿ ಎಂಬುವರ ಖಾತೆಗೆ ಜಮೆಯಾಗಿದೆ. ಸಾವಿತ್ರಿ ಅವರು ಗೃಹಲಕ್ಷ್ಮೀ ಹಣ ಖಾತೆಗೆ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಬ್ಯಾಂಕಿಗೆ ತೆರಳಿದಾದ 1.20 ಲಕ್ಷ ತಮ್ಮ ಖಾತೆಗೆ ಜಮೆ ಆಗಿದ್ದು, ಯಾವುದೋ ಸರಕಾರದ ಹಣ ಬಂದಿರಬೇಕು ಎಂದು ಸುಮ್ಮನಾಗಿದ್ದರು. ಆದರೆ, ಫಲಾನುಭವಿ ದಿನೇಶ್ ಎಲ್ಲಾ ಬ್ಯಾಂಕ್‌ ಗಳಿಗೆ ಅಲೆದು ನಂತರ ತಾಲೂಕು ಕಚೇರಿಗೆ ತೆರಳಿ ವಿಚಾರಣೆ ಮಾಡಿದಾಗ ಮತ್ತೊಂದು ಖಾತೆಗೆ ಹಣ ಜಮಾ ಆಗಿರುವುದು ಬೆಳಕಿಗೆ ಬಂದಿದೆ.

ನಂತರ ಸಾವಿತ್ರಿ ಅವರ ಬಳಿ ಬಂದು ವಿಷಯ ತಿಳಿಸಿದಾಗ ತಮ್ಮ ಖಾತೆಗೆ ಜಮಾ ಆಗಿದ್ದ ಹಣವನ್ನು ಡ್ರಾ ಮಾಡಿ ಫಲಾನುಭವಿಗಳಿಗೆ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇನ್ನು ಸಾರ್ವಜನಿಕರು ಅಧಿಕಾರಿಗಳ ಬೇಜಾವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ಹಲವು ಪ್ರಕರಣ ನಡೆದಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ