ಕಬ್ಬಿಣದ ಏಣಿ ಕೊಂಡೊಯ್ಯುವಾಗ ವಿದ್ಯುತ್ ಸ್ಪರ್ಶ, ವ್ಯಕ್ತಿ ಸ್ಥಳದಲ್ಲೇ ಸಾವು - Mahanayaka

ಕಬ್ಬಿಣದ ಏಣಿ ಕೊಂಡೊಯ್ಯುವಾಗ ವಿದ್ಯುತ್ ಸ್ಪರ್ಶ, ವ್ಯಕ್ತಿ ಸ್ಥಳದಲ್ಲೇ ಸಾವು

prasanna saldan
08/08/2024

ಚಿಕ್ಕಮಗಳೂರು: ಕಬ್ಬಿಣದ ಏಣಿಯನ್ನ ಕೊಂಡೊಯ್ಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗದ್ಗಲ್ ಗ್ರಾಮದ ಬಳಿ ನಡೆದಿದೆ.

ಮೃತನನ್ನ 48 ವರ್ಷದ ಪ್ರಸನ್ನ ಸಾಲ್ಡನ್ ಎಂದು ಗುರುತಿಸಲಾಗಿದೆ. ಮೃತ ಪ್ರಸನ್ನ ಮನೆಯಲ್ಲಿ ಬೇರೆ ಕೆಲಸದ ನಿಮಿತ್ತ ಕಾಫಿ ತೋಟದಿಂದ ಕಬ್ಬಿಣದ ಏಣಿಯನ್ನ ಮನೆಗೆ ತಂದಿದ್ದರು. ಕೆಲಸವಾದ ಬಳಿಕ ಏಣಿಯನ್ನ ಮತ್ತೆ ಕಾಫಿ ತೋಟಕ್ಕೆ ಇಡಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕಬ್ಬಿಣದ ಏಣಿಯಾದ ಕಾರಣ ವಿದ್ಯುತ್ ಸ್ಪರ್ಶಿಸಿದ ಕೂಡಲೇ ಸಾಲ್ಡರ್ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ. ಮನೆಯಿಂದ ಏಣಿಯನ್ನ ಕೊಂಡೊಯ್ಯುವಾಗ ಗಬ್ಗಲ್ ಗ್ರಾಮದ ಶಾಲೆ ಪಕ್ಕ ಎತ್ತರದ ಪ್ರದೇಶದಲ್ಲಿ ಏಣಿಯನ್ನ ಹೊತ್ತುಕೊಂಡು ಹೋಗುವಾಗ ಏಣಿ ವಿದ್ಯುತ್ ತಂತಿಗೆ ತಗುಲಿ ಸಾವನಪ್ಪಿದ್ದಾರೆ.

ಮಲೆನಾಡ ಭಾರೀ ಗಾಳಿ–ಮಳೆಗೆ ವಿದ್ಯುತ್ ತಂತಿಗಳು ಕೂಡ ಜಗ್ಗಿದ್ದವು. ಅತ್ಯಂತ ಕೆಳಭಾಗದಲ್ಲಿ ಇದ್ದ ವಿದ್ಯುತ್ ತಂತಿಗಳಿಂದ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ