ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕರಿಗೆ ತಾಗಿದ ವಿದ್ಯುತ್ ತಂತಿ: ಕ್ಷಣ ಮಾತ್ರದಲ್ಲಿ ಏನಾಯ್ತು ನೋಡಿ - Mahanayaka

ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕರಿಗೆ ತಾಗಿದ ವಿದ್ಯುತ್ ತಂತಿ: ಕ್ಷಣ ಮಾತ್ರದಲ್ಲಿ ಏನಾಯ್ತು ನೋಡಿ

kadapa
21/08/2024


Provided by

ಕಡಪ: ಸೈಕಲ್ ನಲ್ಲಿ ತೆರಳುತ್ತಿದ್ದ ಇಬ್ಬರು ಬಾಲಕರಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಒಬ್ಬ ಬಾಲಕ ಮೃತಪಟ್ಟು, ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಕಡಪ ನಗರದ ಅಗಡಿಬೀದಿಯಲ್ಲಿರುವ ಟೈಟಾನಿಕ್ ಕಟ್ಟಡದ ಮುಂದೆ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ತನ್ವೀರ್ ಮತ್ತು ಆದಂ ಎಂಬ ಹತ್ತು ವರ್ಷದ ವಿದ್ಯಾರ್ಥಿಗಳು ಸೈಕಲ್ ತುಳಿಯುತ್ತಾ ಬಂದಿದ್ದಾರೆ. ಇದ್ದಕ್ಕಿದ್ದಂತೆಯೇ ವಿದ್ಯುತ್ ತಂತಿ ತಗುಲಿ ಸೈಕಲ್ ನಿಂದ ಬಿದ್ದಿದ್ದಾರೆ. ವಿದ್ಯುತ್ ಶಾಕ್ ನ ತೀವ್ರತೆಗೆ ಒಬ್ಬ ಸುಟ್ಟು ಕರಕಲಾಗಿದ್ದಾನೆ. ಇದೇ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿ ಬಾಲಕರ ರಕ್ಷಣೆಗೆ ಯತ್ನಿಸುತ್ತಿರುವುದು ಮತ್ತು ಕೆಲವು ಹೊತ್ತಿನ ಬಳಿಕ ಜನರು ರಸ್ತೆಯಲ್ಲಿ ಸೇರಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕರ ಪೋಷಕರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಸಚಿವ ಗೊಟ್ಟಿಪಾಟಿ ರವಿಕುಮಾರ್ ಘಟನೆ ಸಂಬಂಧ ವಿಷಾಧ ವ್ಯಕ್ತಪಡಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಬಾಲಕನಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದು, ಈ ಘಟನೆ ಯಾಕೆ ನಡೆಯಿತು ಎಂಬ ಬಗ್ಗೆ ತನಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಅವರು ಆದೇಶಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ