ಕಾಮ ನಿಯಂತ್ರಿಸಲಾಗದಿದ್ದರೆ ಅತ್ಯಾಚಾರ ಮಾಡ್ಬೇಡಿ, ನಮ್ಮ ಏರಿಯಾಕ್ಕೆ ಬನ್ನಿ: ಲೈಂಗಿಕ ಕಾರ್ಯಕರ್ತೆಯ ಭಾಷಣ ವೈರಲ್ - Mahanayaka
1:20 AM Monday 15 - September 2025

ಕಾಮ ನಿಯಂತ್ರಿಸಲಾಗದಿದ್ದರೆ ಅತ್ಯಾಚಾರ ಮಾಡ್ಬೇಡಿ, ನಮ್ಮ ಏರಿಯಾಕ್ಕೆ ಬನ್ನಿ: ಲೈಂಗಿಕ ಕಾರ್ಯಕರ್ತೆಯ ಭಾಷಣ ವೈರಲ್

sex workers
21/08/2024

ಕೋಲ್ಕತ್ತಾ: ಆರ್‌.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಸೋನಗಾಚಿಯ ಲೈಂಗಿಕ ಕಾರ್ಯಕರ್ತೆಯರು ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಸಂತ್ರಸ್ತೆಗೆ ನ್ಯಾಯ ನೀಡುವಂತೆ ಒತ್ತಾಯಿಸಿದ್ದಾರೆ.


Provided by

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಲೈಂಗಿಕ ಕಾರ್ಯಕರ್ತೆಯೊಬ್ಬರು, ನಿಮಗೆ ಕಾಮವನ್ನು ನಿಯಂತ್ರಿಸಲಾಗದಿದ್ದರೆ, ಕೋಲ್ಕತ್ತಾದ ನಮ್ಮ ದೊಡ್ಡ ರೆಡ್ ಲೈಟ್ ಏರಿಯಾಕ್ಕೆ ಬನ್ನಿ, ನಾವು ನಿಮ್ಮ ಕಾಮವನ್ನು ಕಡಿಮೆ ಮಾಡ್ತೀವಿ, ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಹತ್ಯೆ ಯಾಕೆ ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ.

ನಾವು ಅನಿವಾರ್ಯ ಕಾರಣಗಳಿಂದ ಈ ವೃತ್ತಿಗೆ ಬಂದಿದ್ದೇವೆ. ನಿಮ್ಮ ಕಾಮಕ್ಕಾಗಿ ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡುವ ಬದಲು ನಮ್ಮ ರೆಡ್ ಲೈಟ್ ಏರಿಯಾಗೆ ಬನ್ನಿ ನಿಮ್ಮ ಕಾಮದಾಹವನ್ನು ತೀರಿಸಿಕೊಳ್ಳಿ ಎಂದು ಆಕ್ರೋಶ ಭರಿತರಾಗಿ ಕಾರ್ಯಕರ್ತೆ ಮಾತನಾಡಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

ನೀವು ಹಣ ನೀಡಿದರೆ, ನಿಮ್ಮ ಲೈಂಗಿಕ ಅಗತ್ಯ ಪೂರೈಸಲು ರೆಡ್ ಲೈಟ್ ಏರಿಯಾದಲ್ಲಿ ಮಹಿಳೆಯರಿದ್ದಾರೆ. ನೀವು ಕಾಮೋದ್ವೇಗದಿಂದ ಮಹಿಳೆಯರ ಮೇಲೆ ಅತ್ಯಾಚಾರ, ಕಿರುಕುಳ ನೀಡಬೇಡಿ ಎಂದು ಅವರು ಒತ್ತಾಯಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ