ಗಾಝಾದಲ್ಲಿ ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ನೆತಾನ್ಯಾಹು ಸಿದ್ದರಿಲ್ಲ: ವರದಿ - Mahanayaka
11:45 AM Thursday 21 - August 2025

ಗಾಝಾದಲ್ಲಿ ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ನೆತಾನ್ಯಾಹು ಸಿದ್ದರಿಲ್ಲ: ವರದಿ

21/08/2024


Provided by

ಗಾಝಾದಲ್ಲಿ ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ನೆತಾನ್ಯಾಹು ಸಿದ್ದರಿಲ್ಲ ಎಂದು ವರದಿಯಾಗಿದೆ. ಈ ಕುರಿತಂತೆ ಬೇರೆ ಬೇರೆ ಕಡೆಯಿಂದ ಎರಡು ಸೂಚನೆಗಳು ಸಿಕ್ಕಿವೆ. ಗಾಝಾದಲ್ಲಿ ಮೃತಪಟ್ಟ ಇಸ್ರೇಲಿ ಸೈನಿಕರ ಬಂಧುಗಳ ಜೊತೆ ಮಾತಾಡುವ ವೇಳೆ ಅವರು ಈ ಸೂಚನೆ ನೀಡಿದ್ದಾರೆ. ಇನ್ನೊಂದು ಕಡೆ ಮೊಸಾದ್ ಮುಖ್ಯಸ್ಥರ ಹೇಳಿಕೆಯಿಂದಲೂ ಇದು ದೃಢಪಟ್ಟಿದೆ.

ಇದೇ ವೇಳೆ ಕದನ ವಿರಾಮ ಒಪ್ಪಂದದ ವೈಫಲ್ಯವನ್ನು ಹಮಾಸ್ ಮೇಲೆ ಹೊರಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಅಲ್ಲದೆ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಎಂಟೆನಿ ಬ್ಲೈಂಕನ್ ಅವರು ಇಸ್ರೇಲ್ ಗೆ ಬಂದು ಪ್ರಧಾನಿ ನೆತಾನ್ಯಾಹು ಅವರನ್ನು ಭೇಟಿಯಾಗಿದ್ದರೂ ಕದನ ವಿರಾಮದ ಕುರಿತಂತೆ ಯಾವುದೇ ಹೇಳಿಕೆ ನೀಡಿಲ್ಲ.

ಹಮಾಸ್ ನ ಬೇಡಿಕೆಗಳನ್ನೆಲ್ಲ ತಳ್ಳಿಹಾಕಿ ಕೇವಲ ಅವರ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವುದನ್ನು ಮಾತ್ರ ಪರಿಹಾರವಾಗಿ ಮುಂದಿಡುವ ಶ್ರಮವನ್ನು ಅಮೆರಿಕ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕತರ್ ಮತ್ತು ಈಜಿಪ್ಟ್ನ ಮೇಲೆ ಒತ್ತಡ ಹಾಕುತ್ತಿದೆ ಎಂದು ವರದಿಯಾಗಿದೆ. ಈಜಿಪ್ಟ್ ಅಧ್ಯಕ್ಷ ಅಲ್ ಸಿಸಿ ಮತ್ತು ಕತಾರಿನ ಅಧ್ಯಕ್ಷರನ್ನು ಬ್ಲೈಂಕನ್ ಭೇಟಿಯಾಗಿದ್ದಾರೆ. ಹಮಾಸ್ ಷರತ್ತನ್ನು ಕೈಬಿಟ್ಟರೆ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲನ್ನು ಒಪ್ಪಿಸುತ್ತೇನೆ ಎಂಬ ರೀತಿಯಲ್ಲಿ ಅವರು ಮಾತಾಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ