ಸಿಬಿಐಗಿಂತ ಹೆಚ್ಚು ಲೋಕಾಯುಕ್ತ ಹಿಂಸೆ ಕೊಡ್ತಿದೆ: ಡಿ.ಕೆ.ಶಿವಕುಮಾರ್ - Mahanayaka
11:04 AM Tuesday 14 - October 2025

ಸಿಬಿಐಗಿಂತ ಹೆಚ್ಚು ಲೋಕಾಯುಕ್ತ ಹಿಂಸೆ ಕೊಡ್ತಿದೆ: ಡಿ.ಕೆ.ಶಿವಕುಮಾರ್

dk shivakumar
22/08/2024

ಬೆಂಗಳೂರು:  ಲೋಕಾಯುಕ್ತ ಸಮನ್ಸ್ ಹಿನ್ನೆಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿದರು.


Provided by

ಗುರುವಾರ ಮಧ್ಯಾಹ್ನ 2ರ ಸುಮಾರಿಗೆ ವಿಚಾರಣೆ ಆರಂಭವಾಗಿತ್ತು. 4:30 ಗಂಟೆಯವರೆಗೂ ವಿಚಾರಣೆ ನಡೆಯಿತು. ಬಳಿಕ  ಮಾಧ್ಯಮಗಳ ಜೊತೆಗೆ ಡಿ.ಕೆ.ಶಿವಕುಮಾರ್ ಮಾತನಾಡಿದರು.

ವಿಚಾರಣೆಗೆ ಹಾಜರಾಗೋಕೆ ಹೇಳಿದ್ದರು. ಇವತ್ತು ಬಂದಿದ್ದೀನಿ, ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಿದ್ರು. ಮತ್ತೆ ಕೆಲ ದಾಖಲೆಗಳೊಂದಿಗೆ ಬರೋಕೆ ಹೇಳಿದ್ದಾರೆ. ಯಾವತ್ತೂ ಬರಬೇಕು ಅನ್ನೋದನ್ನು ಇನ್ನೂ ಹೇಳಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಇವರಿಗಿಂತ(ಲೋಕಾಯುಕ್ತ) ಸಿಬಿಐನವರೇ ಪರವಾಗಿಲ್ಲ, ಒಂದಿನಾನೂ ಕರೆದಿಲ್ಲ, ಏನೂ ಕೇಳಿಲ್ಲ. ಇವರು ನೋಡಿದ್ರೆ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ ಎಂತ ಲೋಕಾಯುಕ್ತರ ಬಗ್ಗೆ ಅವರು ಹೇಳಿದರು.

ಇನ್ನೂ ಯಾವೆಲ್ಲ ದಾಖಲೆಗಳನ್ನು ಕೇಳಿದ್ದಾರೆ ಅಂತ ಹೇಳೋದಕ್ಕೆ ಆಗಲ್ಲ ಎಂದು ಇದೇ ವೇಳೆ ಡಿಕೆಶಿ ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ