ಸಾವಿನ ಮನೆಗೆ ಬಂದಿದ್ದ ಯುವಕ ತನ್ನ ಸ್ನೇಹಿತನಿಂದಲೇ ಬರ್ಬರ ಹತ್ಯೆ!
ಬೆಂಗಳೂರು: ಸಾವಿನ ಮನೆಗೆ ಬಂದಿದ್ದ ಯುವಕನೊಬ್ಬ ತನ್ನ ಸ್ನೇಹಿತನಿಂದಲೇ ಹತ್ಯೆಯಾದ ಘಟನೆ ಬೆಂಗಳೂರಿನ ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ ನಲ್ಲಿ ನಡೆದಿದೆ.
ಶರತ್ ಎಂಬ ಯುವಕ ಹತ್ಯೆಗೀಡಾದ ಯುವಕನಾಗಿದ್ದಾನೆ. ಈತನ ಸ್ನೇಹಿತ ಮತ್ತೊಬ್ಬ ಶರತ್ ಹತ್ಯೆ ನಡೆಸಿದವನಾಗಿದ್ದಾನೆ.
ಅಂಜನಪ್ಪ ಗಾರ್ಡನ್ ನಲ್ಲಿ ಒಂದು ಸಾವಾಗಿತ್ತು. ಹೀಗಾಗಿ ಅಂತಿಮ ದರ್ಶನ ಪಡೆಯಲು ಸ್ನೇಹಿತರಿಬ್ಬರು ಜೊತೆಗೆ ಬಂದಿದ್ದರು. ಅಂತಿಮ ವಿಧಿವಿಧಾನದ ಸಂದರ್ಭದಲ್ಲಿ ಮೃತ ಶರತ್ ಮಹಿಳೆಯೊಬ್ಬಳಿಗೆ ಬೈದಿದ್ದನಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಶರತ್ ತನ್ನ ಸ್ನೇಹಿತನನ್ನು ಪ್ರಶ್ನಿಸಿದ್ದ. ಅಲ್ಲಿಂದ ಆರಂಭಗೊಂಡ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಶರತ್ ತನ್ನ ಸ್ನೇಹಿತ ಶರತ್ ಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: