ವಿವಾಹ ಎಂದರೆ ‘ಬಂಧನ’ವಲ್ಲ: ಬುದ್ಧರ ಪ್ರಕಾರ ವಿವಾಹ ಎಂದರೇನು?
ವಿವಾಹ ಎಂದ ತಕ್ಷಣವೇ ಅದು ಬಂಧನ ಎಂಬ ಅಭಿಪ್ರಾಯಗಳನ್ನು ಈಗಲೂ ಬಹಳಷ್ಟು ಜನರು ಹೇಳುತ್ತಾರೆ. ಬಹುತೇಕ ಸುದ್ದಿಗಳಲ್ಲೂ ‘ವಿವಾಹ ಬಂಧನ’ಕ್ಕೊಳಗಾದರು ಎಂಬ ಸಾಲುಗಳನ್ನು ನೀವು ಕೂಡ ಗಮನಿಸಿರಬಹುದು. ಆದರೆ, ಬುದ್ಧನ ಪ್ರಕಾರ ವಿವಾಹ ಎನ್ನುವುದು ಬಂಧನವಲ್ಲ. ಅದು ಒಪ್ಪಂದ ಅಷ್ಟೆ ಎಂದು ಸಂಶೋಧಕರು ಹೇಳುತ್ತಾರೆ.
ವಿವಾಹ ಎಂದರೆ ಅದೊಂದು ಧಾರ್ಮಿಕ ಬಂಧನ ಎಂದೇ ಈಗಲೂ ಎಲ್ಲರೂ ವಾದಿಸುತ್ತಿರುತ್ತಾರೆ. ಈ ರೀತಿ ವಾದಿಸುವವರ ಸಂಖ್ಯೆ ಈಗ ಕಡಿಮೆ ಇದೆಯಾದರೂ ಅಂತಹ ಮನಸ್ಥಿತಿಗಳು ಇನ್ನೂ ಬದಲಾಗಿಲ್ಲ. ಹಾಗಾಗಿಯೇ ಹಿಂದಿನ ಕಾಲದಲ್ಲಿ ವಿಧವ ವಿವಾಹಕ್ಕೆ ಭಾರೀ ಅಡ್ಡಿಗಳು ಉಂಟಾಗಿತ್ತು. ವಿಧವೆಯನ್ನು ಅನಿಷ್ಠ ಎಂದು ಜರೆಯಲಾಗುತ್ತಿತ್ತು. ಸತಿಸಹಾಗಮನಗಳೆಂಬ ಅನಿಷ್ಠ ಪದ್ಧತಿಗಳ ಮೂಲಕ ಮಹಿಳೆಯನ್ನು ಜೀವಂತವಾಗಿ ಸುಟ್ಟು ಖುಷಿ ಪಡುತ್ತಿದ್ದ ವಿಕೃತರಿದ್ದರು. ಆದರೆ ಇಂತಹ ಯಾವುದೇ ಪದ್ಧತಿಗಳು ಬೌದ್ಧ ಧರ್ಮದಲ್ಲಿ ಇರಲಿಲ್ಲ. ಯಾಕೆಂದರೆ ಬೌದ್ಧ ಧರ್ಮದ ಪ್ರಕಾರ ಮದುವೆ ಎಂದರೆ ಅದೊಂದು ಒಪ್ಪಂದವೇ ಹೊರತು, ಬಂಧನವಲ್ಲ. ಹೀಗಾಗಿಯೇ ಮನುಧರ್ಮಕ್ಕಿಂತ ಬೌದ್ಧ ತತ್ವದ ಅಡಿಯಲ್ಲಿ ಮಹಿಳೆಯರು ಹೆಚ್ಚು ನೆಮ್ಮದಿ ಮತ್ತು ಸುರಕ್ಷಿತವಾಗಿ ಬದುಕುತ್ತಿದ್ದರು. ಮತ್ತು ಈಗಲೂ ಇದ್ದಾರೆ ಎನ್ನುವ ಅಭಿಪ್ರಾಯಗಳಿವೆ.
ಬೌದ್ಧ ಧರ್ಮದ ಪ್ರಕಾರ ಮಹಿಳೆಯು ಪುರುಷನಷ್ಟೇ ಸ್ವತಂತ್ರಳು. ಬೌದ್ಧ ಧರ್ಮ ಮಹಿಳೆಯರಿಗೆ ನೀಡಿದ ಸ್ವಾತಂತ್ರ್ಯವನ್ನು ಬೇರಾವುದೇ ಧರ್ಮಗಳು ನೀಡಿಲ್ಲ. ಬಾಲ್ಯವಿವಾಹ ಸೇರಿದಂತೆ ಯಾವುದೇ ಸಾಮಾಜಿಕ ಅನಿಷ್ಠಗಳು ಇಂದಿಗೂ ಬೌದ್ಧ ಧರ್ಮದಲ್ಲಿ ಈ ಕಾರಣಕ್ಕಾಗಿಯೇ ಕಂಡುಬರುವುದಿಲ್ಲ.
ಬೌದ್ಧ ಧರ್ಮವನ್ನು ಅನುಸರಿಸುವವರು ಎಂದಿಗೂ ಮಹಿಳೆಯನ್ನು ತನ್ನ ಚರಣದಾಸಿ ಎಂದಾಗಲಿ, ತನ್ನಅಡಿಯಾಳು ಎಂದಾಗಲಿ, ತನ್ನ ಭೋಗದ ವಸ್ತು ಎಂದಾಗಲಿ ಮಹಿಳೆಯನ್ನು ನೋಡುವುದಿಲ್ಲ. ಮಹಿಳೆಗೆ ಸಮಾನ ಸ್ಥಾನವನ್ನು ನೀಡುವ ಮೂಲಕ ತನಗೆ ಸಮಾನಳು ಎಂದು ಬುದ್ಧನ ಧಮ್ಮ ಹೇಳುತ್ತದೆ. ಹೀಗಾಗಿಯೇ ಬುದ್ಧನ ಕಾಲದಲ್ಲಿ ಮಾತ್ರ ಮಹಿಳೆ ಅತ್ಯುನ್ನತ ಸ್ಥಾನ ಪಡೆದುಕೊಂಡಿದ್ದಳು.
ಸದ್ಯ ಬುದ್ಧನನ್ನು ಮರೆತಿರುವ ಭಾರತದಲ್ಲಿ ಮಹಿಳೆಗೆ ರಕ್ಷಣೆಯೇ ಇಲ್ಲ ಎಂಬಂತಾಗಿದೆ. ಹಾಡಹಗಲೇ ಮಹಿಳೆಯರ ಮೇಲೆ ಅತ್ಯಾಚಾರ ಅನಾಚಾರಗಳು ನಡೆಯುತ್ತಿದೆ. ಮಹಿಳೆಯನ್ನು, ಹದಿಹರೆಯದ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ, ಜೀವಂತ ಸುಡುವಂತಹ ನೀಚ ಸಂಪ್ರದಾಯಗಳು ಬೆಳೆಯುತ್ತಿವೆ. ಬುದ್ಧನನ್ನು ಅಂದು ಯಾರೆಲ್ಲ ವಿರೋಧಿಸುತ್ತಾ ಬಂದರೋ ಅವರ ಸಂಪ್ರದಾಯಗಳು ಇಂದಿಗೂ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಹಾಗೂ ಅದನ್ನು ಸರಿ ಎಂದು ವಾದಿಸುವ ದುಷ್ಕೃತ್ಯಕ್ಕೆ ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97




























