ಬುದ್ಧ ರಾಜನಾಗಿದ್ದುಕೊಂಡು ಯಾಕೆ ಧರ್ಮ ನಡೆಸಲಿಲ್ಲ?
ಒಂದು ಬಾರಿ ಶಿಷ್ಯ ರಾಹುಲನು ಗೌತಮ ಬುದ್ಧರನ್ನು ಪ್ರಶ್ನಿಸುತ್ತಾ, ನೀನು ರಾಜನಾಗಿದ್ದುಕೊಂಡೇ ಧರ್ಮದಲ್ಲಿ ನಿನ್ನ ಸಾಧನೆಗಳನ್ನು ಮಾಡಬಹುದಿತ್ತಲ್ಲವೇ ಎಂದು ಕೇಳಿದನು. ಬುದ್ಧರು ಸ್ವಲ್ಪ ಹೊತ್ತು ಯೋಚಿಸಿ ಹೇಳಿದರು. ಇಂದು ನಮ್ಮ ಅಡುಗೆಯವನು ವಿಶ್ರಾಂತಿ ಪಡೆದುಕೊಳ್ಳಲಿ, ನೀನು ಇವತ್ತು ಅಡುಗೆ ಮಾಡು ಎಂದು.
ಹಾಗೆಯೇ ಅಂದು ರಾಹುಲನು ಅಡುಗೆ ಮಾಡುತ್ತಾನೆ. ಅಡುಗೆಯ ನಂತರ ಎಲ್ಲರೂ ಊಟ ಮುಗಿಸಿ, “ಇಂದಿನ ಅಡುಗೆಯಲ್ಲಿ ಏನೋ ವಿಶೇಷ ಇತ್ತು ಎಂದು ಎಲ್ಲ ಬಿಕ್ಕುಗಳು ಹೇಳುತ್ತಾರೆ. ಈ ಸಂದರ್ಭದಲ್ಲಿ ರಾಹುಲನನ್ನು ಕರೆದು ಉತ್ತರಿಸಿದ ಬುದ್ಧರು. ನಿಜವಾಗಿಯೂ ಅಡುಗೆಯವನು ಊಟ ರುಚಿಕರವಾದದ್ದು ಹೌದು. ಆದರೆ, ನಿನ್ನ ಅಡುಗೆ ಎಲ್ಲರಿಗೂ ವಿಶಿಷ್ಟವಾದದ್ದು ಅನ್ನಿಸಿತು ಅಲ್ಲವೇ? ನಾನು ರಾಜನಾಗಿ ಇದನ್ನೆಲ್ಲ ನಿರ್ವಹಿಸಿದ್ದರೆ, ಅದರ ಪರಿಣಾಮ ಬೇರೆಯೇ ಇರುತ್ತಿತ್ತು ಎಂದು ಹೇಳುತ್ತಾರೆ.
ಹೌದು ಇಂದಿಗೂ ಬಹುತೇಕರು ಹಾಗೆಯೇ ಪ್ರಶ್ನಿಸುತ್ತಿದ್ದಾರೆ. ಬುದ್ಧರು ರಾಜನಾಗಿಯೇ ಧರ್ಮವನ್ನು ನಡೆಸಬಹುದಿತ್ತಲ್ಲವೇ ಎಂದು. ಆದರೆ, ಒಬ್ಬ ರಾಜ ಒಂದು ಧರ್ಮವನ್ನು ನಡೆಸಿದ್ದರೆ, ರಾಜನ ವೈಯಕ್ತಿಕ ಅಭಿಪ್ರಾಯವನ್ನು ಜನರ ಮೇಲೆ ಹೇರುತ್ತಿದ್ದಾನೆ ಎಂಬ ಅರ್ಥವೂ ಬರುತ್ತದೆ. ಒಬ್ಬ ಅಡುಗೆಯವನ ದಿನ ನಿತ್ಯದ ಊಟದ ರುಚಿ ಒಂದೇ ಆಗಿರುತ್ತದೆ. ಆದರೆ, ರಾಹುಲನು ಅಂದು ಗುಟ್ಟಾಗಿ ಅಡುಗೆ ಮಾಡಿದಾಗ ಎಲ್ಲರೂ ರುಚಿಯಲ್ಲಿಯೇ ಇದರಲ್ಲಿ ಏನೋ ವಿಶಿಷ್ಟವಿದೆ ಎಂದು ಹೇಳಿದರು.
ಅಡುಗೆಯವನು ಅಡುಗೆ ಮಾಡುವುದಕ್ಕೂ ಅಡುಗೆ ಮಾಡದೇ ಇರುವವನು ಚೆನ್ನಾಗಿ ಅಡುಗೆ ಮಾಡಿದರೂ, ಅದರ ವಿಶಿಷ್ಠತೆಯನ್ನು ಜನರು ಕಂಡು ಹಿಡಿಯುತ್ತಾರೆ. ಬುದ್ಧರು ರಾಜರಾಗಿದ್ದರೂ, ಅವರ ಧಾರ್ಮಿಕ ಪಾಂಡಿತ್ಯವನ್ನು ಜನರು ಕಂಡರು. ಇತರರು ಹೇಳುವ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ಏನೋ ವ್ಯತ್ಯಾಸವಿದೆ. ಬುದ್ಧನ ಮಾತಿನಲ್ಲಿ ಏನೋ ವಿಶೇಷತೆ ಇದೆ ಎಂದು ಜನರು ಕಂಡುಕೊಂಡರು. ಈ ವಿಚಾರ ಅರಿವಾಗುತ್ತಿದ್ದಂತೆಯೇ ರಾಹುಲನು ಬುದ್ಧರ ಮಾತಿಗೆ ಒಪ್ಪಿದನು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: